ಬಳಂಜ: ಸಾಂಸ್ಕೃತಿಕ, ಕಲೆ, ಕ್ರೀಡೆ ಹಾಗೂ ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಜ್ಯೋತಿ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆ ಸಭೆಯು ಬಳಂಜ ಶಾಲಾ ವಠಾರದಲ್ಲಿ ಎ.27ರಂದು ನಡೆಯಿತು.
ಬಳಂಜ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ, ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಟ್ರಸ್ಟಿಗಳಾದ ವಿನು ಬಳಂಜ, ರಾಕೇಶ್ ಹೆಗ್ಡೆ ಬಳಂಜ ಇವರ ಮುಂದಾಳತ್ವದಲ್ಲಿ ಜ್ಯೋತಿ ಮಹಿಳಾ ಮಂಡಲದ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಚೇತನಾ ಸಂತೋಷ್ ಜೈನ್, ಉಪಾಧ್ಯಕ್ಷರಾಗಿ ಜೀವಿತಾ ಮತ್ತು ಸುನೀತಾ ಬಾರ್ದೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಯಕ್ಷಿತಾ ಗಣೇಶ್, ಜೊತೆ ಕಾರ್ಯದರ್ಶಿಯಾಗಿ ಅಮೃತಾ ಎಸ್. ಕೋಟ್ಯಾನ್, ಸಂಧ್ಯ ಹೆಚ್.ಡಿ., ಕೋಶಾಧಿಕಾರಿ ಭಾರತಿ ಸಂತೋಷ್, ಜೊತೆ ಕೋಶಾಧಿಕಾರಿ ಸೌಭಾಗ್ಯ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ಧನುಷ ರಾಕೇಶ್ ಹೆಗ್ಡೆ, ಸುಶೀಲಾ ಮೋಹನ್, ಸಾಂಸ್ಕೃತಿಕ ಕಾರ್ಯದರ್ಶಿ ಪುಷ್ಪ ಗಿರೀಶ್ ಮತ್ತು ವಿಶಾಲ ಜಗದೀಶ್, ಸಂಘಟನಾ ಕಾರ್ಯದರ್ಶಿ ಪ್ರತೀಕ್ಷಾ ಮತ್ತು ಭಾರತಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಮತಾ ಯೋಗೀಶ್, ಕಲಾವತಿ, ಅಮಿತಾ ಪುರಂದರ, ಶೃತಿ ರಂಜಿತ್, ಸರಿತಾ ಪ್ರವೀಣ್, ಜಯಶ್ರೀ ಅಂತರ, ಪ್ರಮೀಳಾ ಸುರೇಶ್, ಅನಿತಾ ಹೆಗ್ಡೆ ಬಳಂಜ, ಲಿಖಿತಾ ಮನೋಹರ್, ಅಮೃತಾ ಮಧುಕರ್, ಯಶೋಧ ಲಾಂತ್ಯಾರು, ನಂದಿನಿ ಸುರೇಶ್, ಅನರ್ಥ್ಯ ದೀಪಕ್, ಅಕ್ಷತಾ ಹೇವ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಪದ್ಮಾವತಿ ವಿ. ಜೈನ್, ಚಂದನ ಪಡಿವಾಳ್, ಜಲಜಾ ವಿ ಸಾಲಿಯಾನ್, ಲಲಿತಾ ಟೀಚರ್, ರತ್ನ ಹೇವ, ಮಂಗಳ ದೇವಾಡಿಗ, ಸವಿತಾ ಶೆಟ್ಟಿ ಖಂಡಿಗ, ಶೋಭಾ ಕುಲಾಲ್, ಜಯಂತಿ ತಾರಿಪಡ್ಪು, ವೈಶಾಲಿ ಕುರೆಲ್ಯ ಹಾಗೂ ಪುಷಾ ಹೇವ ಆಯ್ಕೆಯಾದರು. ಬಳಂಜ ಉಮಾಮಹೇಶ್ವರ ಯುವಕ ಮಂಡಲದ ಕಾರ್ಯ ಚಟುವಟಿಕೆಗಳಿಗೆ ಶಕ್ತಿಯಾಗಿ ಸಮಾಜಮುಖಿಯಾಗಿ ತೊಡಗಿಸಿಕೊಂಡು ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸಿದ ಹೆಗ್ಗಳಿಕೆ ಜ್ಯೋತಿ ಮಹಿಳಾ ಮಂಡಲಕ್ಕೆ ಸಲ್ಲುತ್ತದೆ.