Site icon Suddi Belthangady

ಪುದುವೆಟ್ಟಿನ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಹಲ್ಲೆ , ಕೊಲೆ ಬೆದರಿಕೆ- ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು

ಬೆಳ್ತಂಗಡಿ: ಪುದುವೆಟ್ಟಿನ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿ ಬೊಳ್ಮನಾರು ಮನೆ ನಿವಾಸಿ ಹರೀಶ್ ಕುಮಾರ್ (37ವ) ಎಂಬವರಾಗಿದ್ದಾರೆ.

ಎ 23ರಂದು ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಾಲಗಿದೆ.ಕರ್ತವ್ಯಕ್ಕೆ ರಜೆ ಇದ್ದ ದಿನ ಹರೀಶ್ ಕುಮಾರ್ ಕಳೆಂಜ ಗ್ರಾಮದ ಮಾಣಿಗೇರಿ ಹೊಳೆ ಎಂಬಲ್ಲಿ ಜೀಪು ತೊಳೆಯುತ್ತಿದ್ದ ವೇಳೆ ರಾತ್ರಿ 8.30ಸುಮಾರಿಗೆ ಸ್ಥಳೀಯರಾದ ಪ್ರಸನ್ನ, ಅಚ್ಚು, ಶಿವಪ್ಪ, ಉಮೇಶ್ ಗೌಡ ಎಂಬವರು ಇಲ್ಲಿಗೆ ಬಂದು ತನ್ನ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಜೀಪನ್ನು ಅಲ್ಲಿಂದ ಮಾಣಿಂಗೇರಿ ರಸ್ತೆಯ ಸಮೀಪ ತಂದಿಟ್ಟು ಜೀಪಿನ ಟಯರ್ ಗಳ ಗಾಳಿಯನ್ನು ತೆಗೆಸಿದ್ದಾರೆ.

ಅಲ್ಲಿಗೆ ಬಂದ ಹರೀಶ್ ಅದನ್ನು ಪ್ರಶ್ನಿಸಿದಾಗ ಮತ್ತೆ ಅವರ ಮೇಲೆ ಹಲ್ಲೆ ನಡೆಸಿದ್ದು ಹೊಯ್ಗೆ ಬಗ್ಗೆ ತಕರಾರು ತೆಗೆದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಬೊಬ್ಬೆ ಕೇಳಿ ಇತರರು ಬರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರೆ. ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಇವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಕಲಂ 341,323, 324, 504, 506, ಹಾಗೂ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Exit mobile version