Site icon Suddi Belthangady

ಓಡಲ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ- ಚಂಡಿಕಾಯಾಗ, ನೂತನ ಅನ್ನಛತ್ರ, ಶುದ್ಧ ಕುಡಿಯುವ ಯಂತ್ರ ಉದ್ಘಾಟನೆ

ಉಜಿರೆ: ಉಜಿರೆ ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನಲ್ಲಿ ಬ್ರಹ್ಮಶ್ರೀ ಉಚ್ಚೆಲತ್ತಾಯ ನೀಲೇಶ್ವರ ಪದ್ಮನಾಭಾ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪಿ.ರಾಜಗೋಪಾಲ ಯಡಪಡಿತ್ತಾಯ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಎ.29ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ, ಕಲಶಾಭಿಷೇಕ, ಚಂಡಿಕಾ ಯಾಗ ಪೂರ್ಣವತಿ ಮಧ್ಯಾಹ್ನ ಪರ್ವ, ಮಹಾ ಪೂಜೆ ನಡೆಯಿತು. ಇದೆ ಸಂದರ್ಭದಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿದ ಅನ್ನಛತ್ರವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಯು.ಶರತ್ ಕೃಷ್ಣ ಪಡುವೆಟನ್ನಾಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಓಡಲ ಚಂದ್ರಾವತಿ ಧರ್ಣಪ್ಪ ಗೌಡ ಮತ್ತು ಮನೆಯವರು ನೀಡಿರುವ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಅವರು ಉದ್ಘಾಟಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ವ್ಯಾಘ್ರ ಚಾಮುಂಡಿ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಕಾರ್ಯದರ್ಶಿ ಪರಮೇಶ್ವರ, ಉಪಾಧ್ಯಕ್ಷ ಹರೀಶ್ ಕಾವ, ಕೋಶಾಧಿಕಾರಿ ಸುರೇಶ್ ಆಚಾರ್, ಟ್ರಸ್ಟಿಗಳಾದ ಶ್ರೀನಿವಾಸ್ ಗೌಡ ಮಧುರ, ಸುರೇಶ್ ಗೌಡ ಕೂಡಿಗೆ, ವಿನಯಚಂದ್ರ ಬೆಳಕು, ವಿದ್ಯಾ ಕುಮಾರ್ ಕಾಂಚೋಡು, ಅಣ್ಣಿ ಗೌಡ, ವಿಶಾಲಾಕ್ಷಿ, ಪುಷ್ಪಾ ಶ್ರೀನಿವಾಸ ಗೌಡ, ಭಕ್ತರು ಅನ್ನದಾನ ಸೇವಾ ಕರ್ತರು ಉಪಸ್ಥಿತರಿದ್ದರು. ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಸಂಜೆ ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ, ರಾತ್ರಿ 7.30ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ, ಬಳಿಕ ಭಂಡಾರ ತೆಗೆದು ದೈವಕ್ಕೆ ಎಣ್ಣೆ ಬೂಳ್ಯ, ರಾತ್ರಿ 8.30ರಿಂದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ ರಾತ್ರಿ 10 ರಿಂದ ಶ್ರೀ ವ್ಯಾಘ್ರಚಾಮುಂಡಿ ನೇಮೋತ್ಸವ ನಡೆಯಲಿದೆ.

Exit mobile version