Site icon Suddi Belthangady

ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಮುಂಜಿ ಕಾರ್ಯಕ್ರಮ

ಬೆಳ್ತಂಗಡಿ: ಕಲಾಬಾಗಿಲು ರಝಾ ನಗರದಲ್ಲಿರುವ ಬುರೂಜ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಮಿನ್ಹಾಜುಲ್ ಚಾರಿಟೇಬಲ್ ಟ್ರಸ್ಟ್ ಗೋಳಿಯಂಗಡಿ ವತಿಯಿಂದ ಬಡ ಮಕ್ಕಳ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸುಮಾರು 15ರಷ್ಟು ಅರ್ಹ ಕುಟುಂಬದ ಮಕ್ಕಳ ಉಚಿತ ಮುಂಜಿ ಕಾರ್ಯಕ್ರಮ ಸಂಸ್ಥೆಯ ವತಿಯಿಂದ ನಡೆಸಲಾಯಿತು.

ಕರೋಪಾಡಿ ಅಬ್ದುಲ್ ಹಕೀಂ ಮದನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಉದ್ಘಾಟಿಸಿದರು.

ಬುರೂಜ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವ್ಯವಸ್ಥಾಪಕ ರಹ್ಮತುಲ್ಲಾ ಸಾಹಿಬ್ ಶುಭ ಹಾರೈಸಿದರು.

ಸಂಸ್ಥೆಯ ಡೈರೆಕ್ಟರ್ ಬದ್ರುದ್ದೀನ್ ಲತೀಫಿ ಸ್ವಾಗತಿಸಿ, ರಿಯಾಝ್ ಬಾಹಸನಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಸಿದ್ದೀಕ್ ಗೋಳಿಯಂಗಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Exit mobile version