Site icon Suddi Belthangady

ವಿಕಲಚೇತನರು, ಹಿರಿಯ ನಾಗರೀಕರು ಹರ್ಷದಿಂದ ಮತದಾನ

ಬೆಳ್ತಂಗಡಿ: ಭಾರತ ಚುನಾವಣ ಆಯೋಗ ಲೋಕಸಭಾ ಚುನಾವಣೆ ನಡೆದ ಹಿನ್ನಲೆಯಲ್ಲಿ ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಬಹಳ ಹರ್ಷದಿಂದ ಮತಗಟ್ಟೆಗೆ ಬಂದು ಮತದಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಾಲು ಗ್ರಾಮದ ಮತಗಟ್ಟೆ ಸಂಖ್ಯೆ 175, 176, 177, 178 ಮತಗಟ್ಟೆ ಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಾಣ ಮಾಡಿರುವದೇ ಮತದಾನಕ್ಕೆ ಸಹಕಾರಿ ಆಗಿರುತ್ತದೆ.

ಗಾಲಿ ಕುರ್ಚಿ , ಬೋತ ಗನ್ನಡಿ, ವಾಕರ್ ವ್ಯವಸ್ಥೆಯ ಮೂಲಕ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗ್ರಾಮ ಪಂಚಾಯತ್ ಬೆಳಾಲು ವಿಭಾಗ ಹಾಗೂ ಸಂಜೀವಿನಿ ಸಂಘ, ಪಶುಸಖಿ, ಕೃಷಿ ಸಖಿ, ಆಶಾ ಕಾರ್ಯಕರ್ತೆಯರು, ಬೂತ್ ಮಟ್ಟದ ಅಧಿಕಾರಿಗಳ ಸಹಕಾರ ಗ್ರಾಮ ಪಂಚಾಯತ್ ನ ಸಹಕಾರದಿಂದ ಯಶಸ್ಸು ದೊರೆಯುವಲ್ಲಿ ಪಾತ್ರ ವಹಿಸಿರುತ್ತಾರೆ.

ಬೆಳಾಲು ಗ್ರಾಮದ ವಿಕಲಚೇತನರ ಸಂಯೋಜಕ ಈರಣ್ಣ ಎಸ್.ಹೆಚ್.ಇವರ ಮುಂದಾಳತ್ವದಲ್ಲಿ ಗ್ರಾಮದ 45 ವಿಕಲಚೇತನ ಮತದಾರರಲ್ಲಿ 43 ಜನ ಮತ ಚಲಾವಣೆ ಮಾಡಿರುತ್ತಾರೆ.

Exit mobile version