Site icon Suddi Belthangady

ಕಳೆಂಜದಲ್ಲಿ ಮಾತಿನ ಚಕಾಮಕಿ

ಕಳೆಂಜ: ಕಳೆಂಜ ಬೂತ್ ಸಂಖ್ಯೆ 170 ರಿಂದ 173ರಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನ ಮತದಾರರು ಹೆಚ್ಚು ಇರುವ ಮತಗಟ್ಟೆ ಆಗಿದ್ದು ಸುಮಾರು 9 ಗಂಟೆ ಹೊತ್ತಿಗೆ ಮತ ಗಟ್ಟೆಯ ಸಮೀಪ ಎರಡು ಪಕ್ಷದ ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು.

ಪೊಲೀಸರು ಮದ್ಯ ಪ್ರವೇಶಿಸಿ 200 ಮೀಟರ್ ಒಳಗಡೆ ಯಾವ ಪಕ್ಷದ ಕಾರ್ಯಕರ್ತರು ಆಗಮಿಸದಂತೆ ವಾರ್ನಿಂಗ್ ನೀಡಿದರು.

ಈ ಘಟನೆಯಿಂದ ಸುದ್ದಿ ಬಿಡುಗಡೆ ಪತ್ರಿಕೆ ಏಜೆಂಟ್ ಮ್ಯಾಥ್ಯೂ ಅವರ ಅಂಗಡಿಯು ಮತಗಟ್ಟೆಯ ಮುಂಭಾಗದಲ್ಲಿದ್ದು, ಅವರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರು.

ಅವರಿಗೂ ಅಂಗಡಿ ಬಂದ್ ಮಾಡುವಂತೆ ಪೊಲೀಸರು ತಿಳಿಸಿದಾಗ ಅವರು ನಾನು ಯಾವ ಚುನಾವಣೆಗೂ ಅಂಗಡಿ ಬಂದ್ ಮಾಡಿಲ್ಲ.

ಈ ಚುನಾವಣೆಗೆ ಯಾಕೆ ಬಂದ್ ಮಾಡಬೇಕು ನಮಗೆ ಜೀವನ ನಡೆಸಲು ಇದೊಂದೇ ದಾರಿ ಎಂದು ಎಂದು ಪೊಲೀಸ್ ಅಧಿಕಾರಿ ಅರ್ಜುನ್ ರವರಿಗೆ ತಿಳಿಸಿದರು.

Exit mobile version