Site icon Suddi Belthangady

ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಿಂದ ಭಕ್ತಿ ಕಾಣಿಕೆ ಸಮರ್ಪಣೆ

ಶಿಶಿಲ: ಎ.26ರಿಂದ ಎ.28ರವರೆಗೆ ಇಚಿಲಂಪಾಡಿ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಜಿನಮಂದಿರದಲ್ಲಿ ನಡೆಯಲಿರುವ ಧಾಮ ಸಂಪ್ರೋಕ್ಷಣಾ ಪುನಃ ಪ್ರತಿಷ್ಠಾ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಚಂದ್ರಪರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಇಂದು ಎ.25ರಂದು ಭಕ್ತಿ ಕಾಣಿಕೆಯನ್ನು ಸಮರ್ಪಿಸಲಾಯಿತು.

ಭಕ್ತಿ ಕಾಣಿಕೆಯಲ್ಲಿ ಅಕ್ಕಿ, ಸಕ್ಕರೆ, ಅವಲಕ್ಕಿ, ಹೆಸರುಬೇಳೆ, ಅಡಿಕೆ, ತೆಂಗಿನ ಕಾಯಿ, ಅನಾನಸು, ಬಾಳೆಗೊನೆ, ಸಿಯಾಳಗೊನೆ ಮುಂತಾದ ವಸ್ತುಗಳಿದ್ದವು, ಭಕ್ತಿ ಕಾಣಿಕೆಯ ನೇತೃತ್ವವನ್ನು ಡಾ.ಜಯಕೀರ್ತಿ ಜೈನ್, ಚಿತ್ತರಂಜನ್ ಜೈನ್ ಶಿರ್ತಾಡಿ, ಜಿನರಾಜ ಪೂವಣಿ ಉಜಿರೆ, ಮಹಾವೀರ ಜೈನ್ ಕೊರ್ಜೆ ವಹಿಸಿದ್ದರು.

Exit mobile version