Site icon Suddi Belthangady

ಎ.30: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಆರಂಭ

ಉಜಿರೆ: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯೊಂದಿಗೆ ಆರಂಭವಾದ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಅಗತ್ಯತೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ಪಟ್ಟಣಗಳಿಗೆ ಸೀಮಿತವಾದ ಅತ್ಯಾಧುನಿಕ ಸಿ.ಟಿ.ಸ್ಕ್ಯಾನಿಂಗ್ – ಸೊಮಾಟಂ ಸೇವೆಯನ್ನು ಬೆನಕ ಆಸ್ಪತ್ರೆಯಲ್ಲಿ ಒದಗಿಸಲಾಗುವುದು.ಈ ಸ್ಕ್ಯಾನಿಂಗ್ ವ್ಯವಸ್ಥೆಯು ಅತ್ಯಂತ ವಿಶ್ವಾಸಾರ್ಹ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ.

ಉಡುಪಿ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಬೆನಕ ಆಸ್ಪತ್ರೆಯ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗ ಮತ್ತು ಸೀಮನ್ಸ್ ಸೊಮಾಟಂ ಸಿ.ಟಿ.ಸ್ಕ್ಯಾನಿಂಗ್ ಇದರ ಉದ್ಘಾಟನೆಯು ಎ.30ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಸಂಪನ್ನಗೊಳ್ಳಲಿದೆ.

ಮಂಗಳೂರಿನ ಖ್ಯಾತ ರೇಡಿಯೊಲಾಗಿಸ್ಟ್ ಹಾಗೂ ಬಲ್ಮಠ ಡಯಾಗ್ನಿಸ್ಟಿಕ್ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪನಾ ನಿರ್ದೇಶಕ ಡಾ.ಅತೀಂದ್ರ ಭಟ್ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭ ಸರ್ವರಿಗೂ ಸ್ವಾಗತ ಹಾಗೂ ಈ ಸೌಲಭ್ಯವನ್ನು ಸದುಪಯೋಗಸಿಕೊಳ್ಳಬೇಕೆಂದು ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Exit mobile version