Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ನ ವಿದ್ಯಾರ್ಥಿಗಳು ಜೆ ಇ ಇ ದ್ವಿತೀಯ ಸುತ್ತಿನಲ್ಲೂ ಅಮೋಘ ಸಾಧನೆ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೈನ್ಸ್ ಎರಡನೆಯ ಸುತ್ತಿನಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ.

ಪ್ರಜ್ವಲ್ ಭೌತ ವಿಜ್ಞಾನದಲ್ಲಿ 100 ಅಂಕಗಳ ಜೊತೆಗೆ ಒಟ್ಟು 99.88 ಪರ್ಸಂಟೇಲ್ ಪಡೆದುಕೊಂಡಿದ್ದಾರೆ.

ಮೊಹಮ್ಮದ್ ನೌಮನ್ 99.11 ಶೇ, ಚಿನ್ಮಯ್ ನಾಯ್ಕ್ 98.82 ಶೇ, ಅಭಿಷೇಕ್ 98.70 ಶೇ, ಧ್ಯಾನ್ 98.64, ತನ್ಮಯಿ ಶ್ಯಾನುಭಾಗ್ 98.51 ಶೇ, ರಿಷ್ವಿತ್ ಶೆಟ್ಟಿ 97.26 ಶೇ, ವಿವೇಕ್ ವಿನಾಯಕ್ 96.56 ಶೇ, ತನ್ವಿ 96.52 ಶೇ, ಇಂದ್ರೇಶ್ 95.44 ಶೇ, ರೇವಂತ 95.31 ಶೇ, ರಾಹುಲ್.ಸಿ 95.02 ಶೇ, ವೈಭವ್ ಕೆ 94.70 ಶೇಕಡಾ ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.

ಜೆ ಇ ಇ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಅಡ್ವಾನ್ಸ್ ಎಕ್ಸಾಂ ಗೆ ಅರ್ಹತೆ ಪಡೆದಿರುವುದು ಗಮನೀಯ. ಇಂಟಿಗ್ರೇಟೆಡ್ ಸಿಸ್ಟಂ ನಲ್ಲಿ ಇಲ್ಲಿಯ ತರಗತಿಗಳು ನಡೆಯುವುದರಿಂದ ಬೋರ್ಡ್ ಎಕ್ಸಾಂ ಗಳಲ್ಲಿ ಮಾತ್ರವಲ್ಲದೆ , ಜೆ ಇ ಇ, ಸಿ ಇ ಟಿ ಹಾಗೂ ನೀಟ್ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡುತ್ತಿದ್ದಾರೆ.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Exit mobile version