ಬೆಳ್ತಂಗಡಿ: ಮೂಲತಃ ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಕಲಿಯುತ್ತಿದ್ದು ಮಂಗಳವಾರ ಎ.23ರಂದು ರಾತ್ರಿ ಖಾಸಗಿ ಬಸ್ಸಿನಲ್ಲಿ ಊರಿಗೆ ಪ್ರಯಾಣಿಸಿದ್ದರು. ಬಸ್ ಸಕಲೇಶಪುರ ಕಳೆದು ಮುಂದಕ್ಕೆ ಸಾಗುತ್ತಿದ್ದಂತೆಯೇ ಮಲಗಿದ್ದ ವಿದ್ಯಾರ್ಥಿನಿಯ ಮೈಮೇಲೆ ಕೈ ಮಾಡಿರುವುದು ಕಂಡು ಬಂತು.
ಬಳಿಕ ಮತ್ತೊಮ್ಮೆ ಇದೇ ಯತ್ನ ನಡೆದಾಗ ಕೃತ್ಯವನ್ನು ಬಸ್ಸಿನ ಚಾಲಕನ ಗಮನಕ್ಕೆ ತಂದರು. ಆದರೆ ಚಾಲಕನಿಂದ ಯಾವುದೇ ಸ್ಪಂದನೆ ದೊರೆಯದಿದ್ದಾಗ, ಬಸ್ಸಿನಲ್ಲಿದ್ದ ಕೆಲವು ಸಹ ಪ್ರಯಾಣಿಕರು ನೆರವಿಗೆ ಧಾವಿಸಿ ಆತನನ್ನು ವಿಚಾರಿಸಿದಾಗ ಬೆಳ್ತಂಗಡಿಯ ಲಾೖಲ ಗ್ರಾಮದ ಮಹಮ್ಮದ್ ಅಝೀಮ್ ಎಂದು ತಿಳಿಸಿದ್ದ.
ಮುಂದಕ್ಕೆ ದಾರಿ ಮಧ್ಯೆ ಸಿಗುವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಎಂದು ಆಕೆ ಹೇಳಿದ ಬಳಿಕ ಆರೋಪಿ ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಲಭ್ಯ ಮಾಹಿತಿಗಳನ್ನಾಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿಯ ಮನೆಗೆ ಬುಧವಾರ ಸಂಜೆ ಆರ್‌ಎಸ್‌ಎಸ್ ಮುಂದಾಳು ಡಾ| ಪ್ರಭಾಕರ ಭಟ್ ಅವರು ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು. ಪ್ರಕರಣವನ್ನು ಎದುರಿಸಿದ ಯುವತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಇದೊಂದು ಆಘಾತಕಾರಿ ಘಟನೆಯಾಗಿದ್ದು, ಇಂತಹ ಪ್ರಕರಣಗಳು ನಿರಂತರವಾಗಿ ಮರುಕಳಿಸುತ್ತಿವೆ.
ಸಾಮಾನ್ಯ ಮುಸ್ಲಿಮರಂತೆ ಕಂಡರೂ ಭಯೋತ್ಪಾದಕರ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಅನಾಚಾರಕ್ಕೆ ಮುಂದಾಗುತ್ತಿದೆ. ಈ ಪ್ರಕರಣವನ್ನು ಯುವತಿ ಧೈರ್ಯವಾಗಿ ಎದುರಿಸಿದ್ದು, ಎಲ್ಲರಲ್ಲೂ ಕೂಡ ಇಂತಹ ಧೈರ್ಯ ಬರಬೇಕು ಎಂದರು