Site icon Suddi Belthangady

ದಯಾ ವಿಶೇಷ ಶಾಲೆಯಲ್ಲಿ ಭೂಮಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

ಬೆಳ್ತಂಗಡಿ: ವಿಶೇಷ ಶಾಲೆಯ ದೈವೀ ಸ್ವರೂಪದಂತಿರುವ ಈ ಮಕ್ಕಳ ಇಂದಿನ ಪರಿಸ್ಥಿತಿಗೆ ಈ ಸಮಾಜವೂ, ಪರಿಸರದ ಮೇಲೆ ನಾವು ಉಪಯೋಗಿಸಿದ್ದ ಎಂಡೋಸಲ್ಫಾನ್‌ನಂಥ ಮಾರಕ ಕೀಟನಾಶಕ ಬಳಕೆಯೂ ಒಂದು ಕಾರಣ ಎಂದು ಹೇಳಬಹುದು. ಇಂಥ ವಿಶೇಷ ಶಾಲೆಯಲ್ಲಿ ಭೂಮಿ ದಿನಾಚರಣೆ ಮಾಡುತ್ತಿರುವುದು ನಿಜಕ್ಕೂ ರ‍್ಥಪರ‍್ಣ ಎಂದು ಬೆಳ್ತಂಗಡಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಹೇಳಿದರು.

ಏ.22ರಂದು ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಂಗಸಂಸ್ಥೆ ದಯಾ ವಿಶೇಷ ಶಾಲೆಯಲ್ಲಿ ಭೂಮಿ ದಿನಾಚರಣೆ ಮತ್ತು ಕಾನೂನು ಅರಿವು ಕರ‍್ಯಕ್ರಮವನ್ನು ಸಂವಿಧಾನ ಪುಸ್ತಕಕ್ಕೆ ಪುಷ್ಪರ‍್ಚನೆ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.

ಇಂತಹ ದೇವರ ಮಕ್ಕಳ ಸೇವೆ ಮಾಡುವುದೇ ನಾವು ದೇವರಿಗೆ ಸಲ್ಲಿಸುವ ಶ್ರೇಷ್ಠವಾದ ಅಭಿಷೇಕ, ಪುಷ್ಪರ‍್ಚನೆ ಮತ್ತು ಪ್ರರ‍್ಥನೆ. ಈ ಪ್ರದೇಶಗಳಲ್ಲಿ ಹೆಚ್ಚು ಎಂಡೋಸಲ್ಫಾನ್ ಬಾಧಿತ ಮಕ್ಕಳಿದ್ದು, ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಶೀಘ್ರದಲ್ಲೇ ಸಿಗುವಂತಾಗಲು ನಾವೆಲ್ಲರೂ ಶ್ರಮಿಸೋಣ ಎಂದರು.

ಮನೆಯಲ್ಲಿ ಒಬ್ಬ ವಿಶೇಷ ಚೇತನ ಮಗುವನ್ನು ನೋಡಿಕೊಳ್ಳಲು ಎಷ್ಟೋ ಕಷ್ಟವಿದೆ. ಹೀಗಿರುವಾಗ ಈ ವಿಶೇಷ ಶಾಲೆಯ ಮೂಲಕ ಹಲವಾರು ಮಕ್ಕಳು ಇಂದು ಸಮಾಜಮುಖಿಗಳಾಗಿ ಬದುಕುತ್ತಿದ್ದಾರೆ. ಇಂತಹ ಮಹತ್ತರ ಯೋಜನೆ ಕರ‍್ಯಗತಗೊಳಿಸಿರುವ ಫಾ.ವಿನೋದ್ ಮಸ್ಕರೇನಸ್‌, ಸಿಬ್ಬಂದಿ ರ‍್ಗದವರು ಅಭಿನಂದನೀಯರು ಎಂದು ಬೆಳ್ತಂಗಡಿ ಹಿರಿಯ ವಕೀಲರ ಸಂಘದ ಅಧ್ಯಕ್ಷ ಎಲೋಶಿಯಸ್ ಎಸ್. ಲೋಬೊ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಯಾ ವಿಶೇಷ ಶಾಲೆಯ ನರ‍್ದೇಶಕ, ವಕೀಲ ಫಾ.ವಿನೋದ್ ಮಸ್ಕರೇನಸ್ ಮಾತನಾಡಿ, ಭೂಮಿಯು ನಮಗೆಲ್ಲರಿಗೂ ತಾಯಿ ಇದ್ದಂತೆ, ಹೇಗೆ ತಾಯಿಯನ್ನು ನೋಡಿಕೊಳ್ಳುತ್ತೇವೋ ಹಾಗೆಯೇ ಭೂಮಿಯ ರಕ್ಷಣೆ ಕೂಡ ನಮಗೆ ಮುಖ್ಯವಾಗಬೇಕು ಎಂದರು.

ಬೆಳ್ತಂಗಡಿ ವಕೀಲರ ಸಂಘದ ಜತೆ ಕರ‍್ಯರ‍್ಶಿ ವಿನಯಕುಮಾರ್ ಎಂ, ಶಾಲೆಯ ಮುಖ್ಯಶಿಕ್ಷಕಿ ದಿವ್ಯಾ ಟಿ.ವಿ., ಪೋಷಕ ಪ್ರತಿನಿಧಿಯಾಗಿ ಗೀತಾ ಉಪಸ್ಥಿತರಿದ್ದರು. ವಿಶೇಷ ಚೇತನ ಮಕ್ಕಳು, ಪೋಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಐಶ್ರ‍್ಯಾ ಕರ‍್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶಿಕ್ಷಕ ರಮೇಶ್ ವಂದಿಸಿದರು.

Exit mobile version