Site icon Suddi Belthangady

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ- ಹಳ್ಳಿಗಳನ್ನು ಪೇಟೆಗಳಂತೆ ಅಭಿವೃದ್ಧಿಗೊಳಿಸಬೇಕು: ಸಂಪತ್ ಸಾಮ್ರಾಜ್ಯ

ನಾರಾವಿ: ನಮ್ಮ ದೇಶದ ಶ್ರೀಮಂತಿಕೆ ಇರುವುದು ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ. ರೈತನಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ರೈತರ ಬದುಕನ್ನು ಪೇಟೆಯಲ್ಲಿದ್ದವರು ಅರಿತುಕೊಳ್ಳಬೇಕು.ಹಳ್ಳಿಗಳನ್ನು ಪೇಟೆಗಳಂತೆ ಅಭಿವೃದ್ಧಿಗೊಳಿಸಬೇಕು” ಎಂದು ಶಿರ್ತಾಡಿ ಶಿಮುಂಜೆಗುತ್ತು ಶ್ರೀ ಸಂಪತ್ ಸಾಮ್ರಾಜ್ಯ ಹೇಳಿದರು. ಅವರು ದ.ಕ.ಜಿ.ಪ.ಕಿರಿಯ ಪ್ರಾಥಮಿಕ ಶಾಲೆ – ಮಕ್ಕಿ ಇಲ್ಲಿ ನಡೆದ ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಭುವನಜ್ಯೋತಿ ವಸತಿ ಶಾಲೆ ಶಿರ್ತಾಡಿ ಇಲ್ಲಿನ ಪ್ರಾಂಶುಪಾಲ ಪ್ರಶಾಂತ್ ಡಿ’ಸೋಜ ಮಾತನಾಡಿ “ಶ್ರಮವಿಲ್ಲದ ಜೀವನ ವ್ಯರ್ಥ.ಶ್ರಮವಿದ್ದರೆ ಮಾತ್ರ ಒಬ್ಬ ವ್ಯಕ್ತಿ ತನ್ನ ಗುರಿಯನ್ನು ಸಾಧಿಸಬಲ್ಲ” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಂತೋನಿ ಪದವಿ ಕಾಲೇಜು ಇಲ್ಲಿನ ಪ್ರಾಂಶುಪಾಲರಾದ ವಂ.ಡಾ.ಆಲ್ವಿನ್ ಸೆರಾವೊ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಶಾಲೆಯ ಮುಖ್ಯೋಪಾಧ್ಯಾ ಪ್ರಶಾಂತ್.ಎ., ಶ್ರೀ ಪಂಚಶಕ್ತಿ ದೈವಸ್ಥಾನ ಮಕ್ಕಿ ಇದರ ಅಧ್ಯಕ್ಷ ನಾರಾಯಣ ಭಟ್, ಹಾಲು ಉತ್ಪಾದಕರ ಸಹಕಾರಿ ಸಂಘ ಶಿರ್ತಾಡಿ ಇದರ ಅಧ್ಯಕ್ಷ ಶಶಿಧರ ದೇವಾಡಿಗ ಗೇಂದೋಟ್ಟು, ಲೂಯಿಸ್ ಡಿ’ಸೋಜ ಮಕ್ಕಿ ಭಾಗವಹಿಸಿದ್ದರು.

ಅದೇ ರೀತಿ ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಸಂತೋಷ್ ಸಲ್ಡಾನ, ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಬೇಬಿ, ಎನ್ ಎಸ್ ಎಸ್ ಕಾರ್ಯದರ್ಶಿಗಳಾದ ಕು.ವಿಘ್ನೇಶ್ ಆಚಾರ್ಯ, ಕು.ಅನ್ವಿತಾ ರಾವ್ ಹಾಗೂ ವಿದ್ಯಾರ್ಥಿ ಸಂಘದ ಅದ್ಯಕ್ಷ ಕೇಶವ್ ಶರ್ಮ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದಿನೇಶ್ ಬಿ.ಕೆ ಬಳಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕ ಅವಿನಾಶ್ ಲೋಬೊ ಧನ್ಯವಾದವಿತ್ತರು.ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಸಂತೋಷ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version