Site icon Suddi Belthangady

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ’ ಸಂಭ್ರಮ

ಬೆಳ್ತಂಗಡಿ: ನಾಡಿನ ಪ್ರಸಿದ್ಧ ಮತ್ತು ಶುದ್ದತೆಗೆ ಹೆಸರುವಾಸಿದ ಎಂಟು ದಶಕಗಳ ಪರಂಪರೆಯಿರುವ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಏ.22ರಿಂದ ಮೇ.20 ರವರೆಗೆ ಮುಳಿಯ ಚಿನ್ನೋತ್ಸವ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಚಲನಚಿತ್ರ ನಟಿ ಸಿಂಚನ ಪಿ ರಾವ್ ನೆರವೇರಿಸಿ ಮಾತನಾಡಿ ನಂಬಿಕೆ ಮತ್ತು ಪರಿಶುದ್ಧತೆಗೆ ಹೆಸರುವಾಸಿಯಾದ ಮುಳಿಯ ನಮ್ಮೆಲ್ಲರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ. ಗ್ರಾಹಕರಿಗೆ ಉತ್ತಮವಾದ ಸೇವೆ ಇಲ್ಲಿ ದೊರೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಳಿ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್‌ ವಹಿಸಿ ಮಾತನಾಡಿ ನಮ್ಮ ಕುಟುಂಬದ ಎಲ್ಲರೂ ಮುಳಿಯದ ಗ್ರಾಹಕರು.ವೈರಿಟಿಗಳ ಚಿನ್ನಾಭರಣಗಳಿಗೆ ಮುಳಿಯ ಹೆಸರುವಾಸಿಯಾಗಿದೆ. ಮುಳಿಯದಲ್ಲಿ ನಗುಮೊಗದ ಸೇವೆ ಗ್ರಾಹಕರಿಗೆ ಸಿಗುತ್ತಿದೆ ಎಂದರು.

ಮಾರ್ಕೆಟಿಂಗ್ ಕನ್ಸಲ್ವೆಂಟ್ ವೇಣುಗೋಪಾಲ್‌ ಶರ್ಮ ಮಾತನಾಡಿ ಮುಳಿಯದಲ್ಲಿ ಪ್ರತಿವರ್ಷ 2 ಸಲ ಚಿನ್ನೋತ್ಸವ ಮಾಡುತ್ತೇವೆ. ಊರಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ಡಿಸೈನ್ ಮಾಡಿ ನೀಡುತ್ತೇವೆ. ಅಂತರಾಷ್ಟ್ರೀಯ ಮಟ್ಟದ ಡಿಸೈನ್ ನಮ್ಮಲ್ಲಿದೆ. 80 ವರ್ಷದ ಹಿಂದೆ ಚಿನ್ನಕ್ಕೆ 2ರೂ ಇತ್ತು. ಇವತ್ತು ಹತ್ತಿರತ್ತಿರ 7 ಸಾವಿರಕ್ಕೆ ಬಂದು ನಿಂತಿದೆ. ಚಿನ್ನಕ್ಕೆ ಇನ್ವೆಸ್ಟೆಂಟ್ ಮಾಡಬಹುದು. ಗ್ರಾಹಕರ ಸಹಕಾರ ಹಾಗೂ ಪ್ರೀತಿಯಿಂದ ಬೆಳ್ತಂಗಡಿಯಲ್ಲಿ ಮುಳಿಯ ನಂಬ‌ರ್ ಒನ್ ಸಂಸ್ಥೆಯಾಗಿ ಬೆಳೆದಿದೆ ಎಂದರು.

ಮದುವೆ, ಉಪನಯನ, ಗೃಹಪ್ರವೇಶ, ಮಗುವಿನ ನಾಮಕರಣ, ಇತ್ಯಾದಿ ನಿಮ್ಮ ಸಮಾರಂಭಗಳಲ್ಲಿ ನಿಮ್ಮ ಸಂಭ್ರಮವನ್ನು ಹೆಚ್ಚಿಸಲು ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವದಲ್ಲಿ ಭಾಗವಹಿಸಿ ನಿಮ್ಮ ನೆಚ್ಚಿನ ಆಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿ ಮಾಡಬಹುದಾಗಿದೆ.ಈ ಬಾರಿಯ ಚಿನ್ನೋತ್ಸವದಲ್ಲಿ ಅಮೂಲ್ಯ ಆಭರಣಗಳು ಹಾಗೂ ಕಿಸ್ನ ಮಾದರಿಯ ಜ್ಯುವೆಲ್ಸ್ ಇರಲಿದೆ. ಅಲ್ಲದೇ ಗ್ರಾಹಕರಿಗೆ ಖರೀದಿಯ ಮೇಲೆ ಬಹುಮಾನಗಳು ಇರಲಿದೆ. ವಿವಿಧ ವಿನ್ಯಾಸಗಳ ಆಭರಣಗಳು ವಿಶೇಷ ಬೆಲೆಯಲ್ಲಿ ಲಭ್ಯವಾಗಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಬೆಳ್ತಂಗಡಿ ಮುಳಿಯದ ಲೋಹಿತ್ ಕುಮಾ‌ರ್ ಎಲ್ಲರನ್ನು ಸ್ವಾಗತಿಸಿದರು.ಮುಳಿಯ ಸಂಸ್ಥೆಯ ದಿನೇಶ್‌ ಅವರು ಧನ್ಯವಾದ ಸಲ್ಲಿಸಿದರು.

Exit mobile version