Site icon Suddi Belthangady

ಅಳದಂಗಡಿ: ಪ್ರಾ.ಕೃ.ಪ.ಸ.ಸಂಘ ಮತ್ತು ಬೆಳ್ತಂಗಡಿ ಜೆಸಿಐ ಮಂಜುಶ್ರೀ ಆಶ್ರಯದಲ್ಲಿ ಉದ್ಯೋಗ ಕೌಶಲ್ಯ ತರಬೇತಿ

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜಂಟಿ ಆಶ್ರಯದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಇತ್ತೀಚೆಗೆ ಅಳದಂಗಡಿ ಸಹಕಾರ ಸಂಘದಲ್ಲಿ ನಡೆಯಿತು.

ಜೆಸಿಐ ಭಾರತದ ರಾಷ್ಟ್ರೀಯ ತರಬೇತಿದಾರ ಜೆಸಿ ಸುಧಾಕರ್ ಪೂಜಾರಿ ಕಾರ್ಕಳ ಸಂಘದ ಸಿಬ್ಬಂದಿಗಳಿಗೆ ಉದ್ಯೋಗ ಕೌಶಲ್ಯದ ಬಗ್ಗೆ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಿ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ವಾಚಿಸಿದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್ ಡಿ, ಹಾಗೂ ಪದಾಧಿಕಾರಿಗಳು ಮತ್ತು ಸೊಸೈಟಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಮೀರಾ ವಂದಿಸಿದರು. ಅತ್ಯುತ್ತಮ ತರಬೇತಿಯನ್ನು ನೀಡಿದ ಸಂಪನ್ಮೂಲ ವ್ಯಕ್ತಿಯಾದ ಸುಧಾಕರ್ ಪೂಜಾರಿಯವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

Exit mobile version