Site icon Suddi Belthangady

ಬಳಂಜ: ಎಲ್ಯೋಟ್ಟು ರಾಜು ಪೂಜಾರಿ-ಕಮಲಾ ಹಾಗೂ ಬಾಬು ಪೂಜಾರಿ-ಪ್ರೇಮ ದಂಪತಿಗಳ ವೈವಾಹಿಕ ಸುವರ್ಣ ಮಹೋತ್ಸವ ಸಂಭ್ರಮ

ಬಳಂಜ: ಎಲ್ಯೊಟ್ಟು ಮನೆತನದ ಹಿರಿಯರಾದ ರಾಜು ಪೂಜಾರಿ ಮತ್ತು ಕಮಲಾ ಹಾಗೂ ಬಾಬು ಪೂಜಾರಿ ಮತ್ತು ಪ್ರೇಮ ದಂಪತಿಗಳ ವೈವಾಹಿಕ ಜೀವನದ ಸಾರ್ಥಕ್ಯ ಐವತ್ತು ವರ್ಷಗಳ ಜೀವನ ಪಯಣದ ಸುವರ್ಣ ಮಹೋತ್ಸವ ಸಂಭ್ರಮವು ಎಲ್ಯೊಟ್ಟು ಕುಟುಂಬಸ್ಥರ ನೇತೃತ್ವದಲ್ಲಿ ಏ.21ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಎರಡು ಜೋಡಿಗಳು ಪರಸ್ಪರ ಹಾರ ಹಾಕಿ ಕೇಕ್ ಕತ್ತರಿಸಿ ಸಿಹಿ ತಿಂಡಿ ಹಂಚಿಕೊಂಡು ಸಂಭ್ರಮಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಎಚ್ ದರ್ಣಪ್ಪ ಪೂಜಾರಿಯವರು ರಾಜು ಪೂಜಾರಿಯವರ ಜೊತೆಗಿನ ಒಡನಾಟವನ್ನು ಸ್ಮರಿಸಿ ಶುಭವನ್ನು ಹಾರೈಸಿದರು.

ಎಲ್ಯೊಟ್ಟು ಕುಟುಂಬದ ಆಪ್ತರಾದ ಸದಾನಂದ ಸಾಲಿಯಾನ್ ಬಳಂಜ, ರಾಜು ಪೂಜಾರಿ ಹಾಗೂ ಬಾಬು ಪೂಜಾರಿಯವರು ತಮ್ಮ ಕುಟುಂಬ ಹಾಗೂ ಸಮಾಜದ ಜೊತೆಗೆ ಇಟ್ಟುಕೊಂಡ ಉತ್ತಮ ಸಂಬಂಧಗಳನ್ನು ನೆನಪಿಸಿ ಇವರ ಸುಂದರ ದಾಂಪತ್ಯ ಬದುಕಿಗೆ ಶುಭವನ್ನು ಸಲ್ಲಿಸಿದರು.

ಬಳಂಜ ಬಿಲ್ಲವ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ರವರು ಎಲ್ಯೊಟ್ಟು ಕುಟುಂಬ ಬಿಲ್ಲವ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಎಲ್ಯೋಟ್ಟು ಕುಟುಂಬದವರು ಬಿಲ್ಲವ ಸಂಘಕ್ಕೆ ಮೈಕ್ ಸ್ಟ್ಯಾಂಡ್ ಕೊಡುಗೆಯಾಗಿ ನೀಡಿದರು.ರಾಜು ಪೂಜಾರಿಯವರ ಪುತ್ರ ಸಮಾಜ ಸೇವಕರಾದ ಹರೀಶ್ ವೈ ಚಂದ್ರಮ ಬಳಂಜ ಇವರ ಪ್ರಧಾನ ಸಂಚಾಲಕತ್ವದ ಪ್ರತಿಷ್ಠಿತ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಮನ ರಂಜಿಸುವ ನೃತ್ಯ ವೈಭವ ಕಾರ್ಯಕ್ರಮಕ್ಕೆ ಅದ್ಬುತ ಮೆರುಗನ್ನು ನೀಡಿತು.ಕಾರ್ಯಕ್ರಮದಲ್ಲಿ ಎಲ್ಯೋಟ್ಟು ಕುಟುಂಬದ ಎಲ್ಲಾ ಸದಸ್ಯರು ಊರಿನ ಗಣ್ಯರುಬಳಂಜ ಬಿಲ್ಲವ ಸಂಘದ ಪದಾಧಿಕಾರಿಗಳು, ಹಿತೈಷಿ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ದಂಪತಿಗಳಿಗೆ ಶುಭವನ್ನು ಹಾರೈಸಿದರು.

ಆಗಮಿಸಿದ ಎಲ್ಲರನ್ನೂ ರಾಜು ಪೂಜಾರಿಯವರ ಸಹೋದರರಾದ ನೊಣಯ್ಯ ಪೂಜಾರಿ ಶಶಿಕಲಾ ದಂಪತಿಗಳು,ಯುವರಾಜ ವೈ,ವಿಜಯ ದಂಪತಿಗಳು ಮತ್ತು ಮಕ್ಕಳು, ಭುವನೇಂದ್ರ ವೈ, ಕೇಶವತಿ ದಂಪತಿಗಳು ಮತ್ತು ಮಕ್ಕಳು ಎಲ್ಯೊಟ್ಟು, ಸಹೋದರಿ ವೇದಾವತಿ ಲಕ್ಷ್ಮಣ ಪೂಜಾರಿ ಮತ್ತು ಮಕ್ಕಳು, ಮಕ್ಕಳಾದ ಸುಹಾಸಿನಿ ಭಾಬಾ ಶಂಕರ್ ಮತ್ತು ಮಕ್ಕಳು, ಹರೀಶ್ ವೈ ಚಂದ್ರಮ, ಹರಿಣಿ ಕರುಣಾಕರ್ ಮತ್ತು ಮಕ್ಕಳು, ಪ್ರಶಾಂತ್ ವೈ ಅರ್ಚನ ದಂಪತಿಗಳು ಮತ್ತು ಮಗ, ಜಗದೀಶ್ ಮತ್ತು ವಿಶಾಲ ದಂಪತಿಗಳು ಮತ್ತು ಮಕ್ಕಳು ಬಳ್ಳಿದಡ್ಡ, ಜಯಂತಿ, ಜಯಶೀಲ, ವಿನೋದ ಹಾಗೂ ಮೊಮ್ಮಕ್ಕಳು ಎಲ್ಲರನ್ನೂ ಸ್ವಾಗತಿಸಿ ಅತಿಥ್ಯವನ್ನು ನೀಡಿದರು.

ಒಂದು ಅಪರೂಪದ ಅಭೂತಪೂರ್ವ ಸುಂದರ ಸಂಜೆಯ ಸುವರ್ಣ ಸಂಭ್ರಮದ ಜೊತೆ ಜೊತೆಯಲ್ಲಿ ಸೇರಿದ ಎಲ್ಲರಿಗೂ ವಿಶಿಷ್ಟವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ದೀಕ್ಷಿತ್ ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು.ಹರೀಶ್ ವೈ ಚಂದ್ರಮ ಕೃತಜ್ಞತೆಯನ್ನು ಸಲ್ಲಿಸಿದರು.

Exit mobile version