Site icon Suddi Belthangady

ಬಂದಾರು: ಬಟ್ಲಡ್ಕ ದರ್ಗಾ ಶರೀಫಿನಲ್ಲಿ ಉರೂಸ್ ಮುಬಾರಕ್ ಸಮಾರೋಪ

ಬಂದಾರು: ಬಟ್ಲಡ್ಕ ದರ್ಗಾ ಶರೀಫಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಮುಬಾರಕ್ ಸಮಾರೋಪ ಸಮಾರಂಭವು ಎ.19ರಂದು ಶುಕ್ರವಾರ ಬಟ್ಲಡ್ಕ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಬಟ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಪ್ರಬಾಷಣ ಬಹು ಹಂಝ ಮಿಸ್‌ಬಾಹಿ ಒಟೆಪದವು ನಡೆಸಿದರು.

ದುವಾಶಿರ್ವಚನ ಅಸ್ಯಯ್ಸಿದ್ ಶಿಹಾಬುದ್ದೀನ್ ಅಲ್‌ಹೈದರೋಪಿ ನೇತೃತ್ವ ನೀಡಿದರು.

ಮುಹಮ್ಮದ್ ಅದನಿ ಅಲ್‌ಮುಈನಿ ಸ್ವಾಗತಿಸಿ, ಸ್ಥಳಿಯ ಖತೀಬ್‌ಮುಹಮ್ಮದ್ ಆಸಿಪ್ ಸಖಾಪಿ ಉದ್ಘಾಟನೆ ಮಾಡಿದರು.

ವೇದಿಕೆಯಲ್ಲಿ ಮುಹಮ್ಮದ್ ಬಂದಾರು ಪ್ರದಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ, ಅಬ್ದುಲ್ ರಹಿಮಾನ್ ಸಖಾಪಿ ಕುಂಬಳೆ, ಸಾದಿಕ್ ಸಹಿದಿ ನೆಕ್ಕಿಲು, ಬಹು ಶಫೀಕ್ ಅಹ್‌ಸನಿ, ಅಲ್ ಕಾಮಿಲಿ ಪಿ.ಬಿ , ನಿಝಾಮ್‌ ಅಶ್ರಫ್ ಸ ಅದಿ ಬಟ್ಲಡ್ಕ, ಸೈಪುದ್ದೀನ್ ಬಟ್ಲಡ್ಕ, ರಫೀಕ್ ಪಿ ಉಪಸ್ದಿತರಿದ್ದರು.

Exit mobile version