Site icon Suddi Belthangady

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸಿಸ್ಟರ್ ಟೆಸ್ಸಾ ಗೆ ಸನ್ಮಾನ

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಯಾಸ ವೃತ ಸ್ವೀಕರಿಸದ ವಂದನಿಯ ಭಗಿನಿ, ಸಿಸ್ಟರ್ ಟೆಸ್ಸಾ ಇವರನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ನೆಲ್ಯಾಡಿ, ಸನ್ನಂಪಾಡಿಯ ವಾಯಯಿಲ್ ಸಣ್ಣಿ ಮತ್ತು ಚಿನ್ನಮ್ಮ ದಂಪತಿಗಳ ಹಿರಿಯ ಪುತ್ರಿಯಾಗಿರುವ ಇವರು ಎಂಟು ವರ್ಷಗಳ ತರಬೇತಿಯನ್ನು ಮುಗಿಸಿ ಕೇರಳದ ಪೇರಾವೂರ್ ನ ತೊಂಡಿಯ ಮಾತೃ ಆಶ್ರಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ದಲ್ಲಿ ಪವಿತ್ರ ಹೃದಯದ ಸನ್ಯಾಸ ಬದುಕಿನ ದೀಕ್ಷೆಯನ್ನು ತಲಶೇರಿ ಮಹಾ ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಜೋಸೆಫ್ ಪಾ೦ಪ್ಲಾನಿ ನೀಡಿದರು.ಇಂದು ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾನ ಮಾಡಲಾಯಿತು.

ಕಾಲವನ್ನು ಮೆಟ್ಟಿ ನಿಲ್ಲುವ ಆದ್ಯಾತ್ಮ ಶಕ್ತಿಯನ್ನು ಪಡೆದರೆ ಮಾತ್ರ ಸನ್ಯಾಸ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದರು.

ಟ್ರಸ್ಟಿ ಗಳಾದ ಈಪನ್ ವರ್ಗೀಸ್ ಬಿಜು ಪೆರುoಪಲ್ಲಿ, ಜೋಬಿನ್ ಪರ ಪರಾಗತ್, ಸಿಸ್ಟೆರ್ ಲಿಸ್ ಮಾತ್ಯು ಎಸ್ ಎಚ್, ಉಪಸ್ಥಿತರಿದ್ದರು.

ಕಾರ್ಯದರ್ಶಿ ಜೆಸ್ಸಿ ಕಾರ್ಯಕ್ರಮ ನಿರೂಪಿಸಿದರು.

Exit mobile version