Site icon Suddi Belthangady

ಬಳಂಜ: ಶ್ರಿ ಉಮಾಮಹೇಶ್ವರ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಸುಕೇಶ್, ಕಾರ್ಯದರ್ಶಿಯಾಗಿ ಅಶೋಕ ಶೆಟ್ಟಿ

ಬಳಂಜ: ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ಬಳಂಜ ಶ್ರಿ ಉಮಾಮಹೇಶ್ವರ ಯುವಕ ಮಂಡಲ ಕಳೆದ 40 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು ಇದೀಗ ಬಳಂಜ ಶಾಲಾ 75ನೇ ಅಮೃತಮಹೋತ್ಸವ ಆಚರಣೆಗೆ ಸಿದ್ದಗೊಳ್ಳುತ್ತಿದ್ದು ಇದರ ಹಿನ್ನಲೆಯಲ್ಲಿ ನೂತನ ಪದಾದಿಕಾರಿಗಳ ಆಯ್ಕೆ ಯುವಕ ಮಂಡಲದ ಮಾಜಿ ಅದ್ಯಕ್ಷರುಗಳಾದ ಉಸ್ಮಾನ್ ಬಳಂಜ, ಹೆಚ್ ದರ್ಣಪ್ಪ ಪೂಜಾರಿ, ಪ್ರಮೋದ್ ಕುಮಾರ್ ಜೈನ್, ಯುವಕ ಮಂಡಲದ ಪೋಷಕ ಕೆ ವಸಂತ ಸಾಲ್ಯಾನ್ ಕಾಪಿನಡ್ಕ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಸುಕೇಶ್ ಹಾನಿಂಜ, ಉಪಾಧ್ಯಕ್ಷರಾಗಿ ಸಂಭ್ರಮ ಗಣೇಶ್, ಕಾರ್ಯದರ್ಶಿಯಾಗಿ ಅಶೋಕ್ ಶೆಟ್ಟಿ ಪೊಸಮಾರ್, ಜೊತೆಕಾರ್ಯದರ್ಶಿಯಾಗಿ ರಜತ್ ಹೆಗ್ಡೆ ಕೋಶಾದಿಕಾರಿಯಾಗಿ ಗುರು ಹೆಗ್ಡೆ ಇವರನ್ನು ಆಯ್ಕೆಮಾಡಲಾಯಿತು.

ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಾಸಾದ್ ಕಾಪಿನಡ್ಕ,ಯತೀಶ್ ದೇವಾಡಿಗ, ಸಾಂಸ್ಕೃತಿಕ ರಾಯಭಾರಿಯಾಗಿ ಸತೀಶ್ ದೇವಾಡಿಗ,ಸುದೀರ್ ಜೈನ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋಧರ ಶೆಟ್ಟಿ ಅಟ್ಲಾಜೆ, ಸುಭಾಷ್ ಹೇವ, ಯೋಗೀಶ್ ಯೆಯಿಕುರಿ, ಪ್ರಣಾಮ್ ಶೆಟ್ಟಿ ನಾಲ್ಕೂರು, ಸಚಿನ್ ಶೆಟ್ಟಿ, ಸಂತೋಷ್ ಪಿ ಕೋಟ್ಯಾನ್, ರಂಜಿತ್ ನಾಲ್ಕೂರು, ಪ್ರವೀಣ್ ಲಾಂತ್ಯಾರ್, ಮನೀಶ್ ಬಳಂಜ, ನಿತೇಶ್ ಕಾಪಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಳಂಜ ಶಾಲಾ ಅಮ್ರುತ ಮಹೋತ್ಸವ ಸಮಿತಿ ಅದ್ಯಕ್ಷ ಚಂದ್ರಶೇಖರ್ ಪಿ.ಕೆ ,ಬಳಂಜ ಶಿಕ್ಷಣ ಟ್ರಸ್ಟ್ ಇದರ ಅಧ್ಯಕ್ಷ ಮನೋಹರ್ ಬಳಂಜ, ಉಪಾಧ್ಯಕ್ಷ ವಿನು ಬಳಂಜ, ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಷ್ಟಿಗಳಾದ ರಾಕೇಶ್ ಹೆಗ್ಡೆ, ಸಂತೋಷ್ ಕುಮಾರ್ ಕಾಪಿನಡ್ಕ, ಪ್ರವೀಣ್ ಹೆಚ್ ಎಸ್, ಕಾನೂನು ಸಲಹೆಗಾರರಾದ ಸತೀಶ್ ರೈ ಬಾರ್ದಡ್ಕ, ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಶಾಲಾಬಿವ್ರುದ್ದಿ ಸಮಿತಿ ರತ್ನಾಕರ್ ಮತ್ತು ವಿವಿದ ಸಂಘ ಸಂಸ್ಥೆಗಳ ಪದಾದಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version