Site icon Suddi Belthangady

ಮೇ.3-5: ನಾರಾವಿ ಭ| ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣೆ ಮತ್ತು ಪ್ರತಿಷ್ಟಾ ಮಹೋತ್ಸವ

ನಾರಾವಿ: ಧಾಮ ಸಂಪ್ರೋಕ್ಷಣೆಗೆ ಸಿದ್ಧಗೊಳ್ಳುತ್ತಿರುವ ನಾರಾವಿ ಭ| ಶ್ರೀ ಧರ್ಮನಾಥ ಸ್ವಾಮಿ ಬಸದಿಯು ಜಿನ ಧರ್ಮ ಪ್ರಭಾವಣೆಯ ಅತಿಶಯ ಕ್ಷೇತ್ರವಾಗಿ ನಾರಾವಿ ಮಾಗಣೆ ಭಗವಾನ್ 1008 ಶ್ರೀ ಧರ್ಮನಾಥ ಸ್ವಾಮಿಜಿನ ಬಸದಿಯು ಧರ್ಮ ಜ್ಯೋತಿಯಿಂದ ವಿರಾಜಮಾನವಾಗಿದೆ.

ಕಾರ್ಕಳ ಜೈನ ಮಠದ ವ್ಯಾಪ್ತಿಯಲ್ಲಿ ಬರುವ ಈ ಬಸದಿಯು, ಸುಮಾರು 900 ವರ್ಷಗಳಷ್ಟು ಪ್ರಾಚೀನತೆಯನ್ನು ಹೊಂದಿದೆ. ಈ ಬಸದಿಯು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯತ್ತ ಮುಖ ಮಾಡಿದೆ. ಇಲ್ಲಿನ ಬಸದಿಯ ಮಾಡಿಗೆ ತಾಮ್ರದ ಹೊದಿಕೆ ಅಳವಡಿಸುವುದರೊಂದಿಗೆ ಬಸದಿ ಪರಿಸರದಲ್ಲಿ ಇನ್ನಿತರ ಅಭಿವೃದಿ ಕಾಮಗಾರಿಯನ್ನು ಕೈಗೆತಿಕೊಳ್ಳಲಾಗಿದೆ. ಅಲ್ಲದೆ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವಕ್ಕೂ ಈ ನಾರಾವಿ ಮಾಗಣೆ ಅತಿಶಯ ಜಿನ ಕ್ಷೇತ್ರವು ಸಜ್ಜುಗೊಳ್ಳುತ್ತಿದೆ.

ಬಸದಿಯ ನಿರ್ವಹಣೆಯು ಅಡಳಿತ ಸಮಿತಿಯ ಮೂಲಕ ನಡೆಯುತ್ತಿದೆ. ಅಡಳಿತ ಸಮಿತಿಯಲ್ಲಿ ಅಧ್ಯಕ್ಷರಾಗಿ ಬಿ.ನಿರಂಜನ ಅಜ್ರಿಯವರು, ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯಾರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅದೇ ರೀತಿ ಬಸದಿಯ ಜೀರ್ಣೋದ್ಧಾರದ ಯಶಸ್ವಿಗಾಗಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿದ್ದು, ಅದರಲ್ಲಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಈದು-ನಾರಾವಿ ಮಾಗಣೆಯ ಸಮಸ್ತ ಶ್ರಾವಕರು-ಶ್ರಾವಕಿಯರು ಬಸದಿ ಜೀರ್ಣೋದ್ಧಾರದಲ್ಲಿ ನಿರಂತರವಾಗಿ ಸೇವಾತತ್ಪರರಾಗಿದ್ದಾರೆ.

ಇಲ್ಲಿ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅಂತೆಯೇ ಅಭಿವೃದ್ಧಿಯ ಪ್ರಸನ್ನತೆಯಲ್ಲಿ ಸಾಗುತ್ತಿರುವ ಈ ಬಸದಿಯಲ್ಲಿ ಇದೇ ಬರುವ ಮೇ.03, 04, 05ರಂದು ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಗಳವರು ಶ್ರೀ ಜೈನ ಮಠ ಕಾರ್ಕಳ, ಪರಮ ಪೂಜ್ಯ ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಜೈನ ಮಠ ಮೂಡಬಿದ್ರೆ, ನಾಡಿನ ಸಮಸ್ತ ಶ್ರೀ ಜೈನ ಮಠದ ಭಟ್ಟಾರಕರುಗಳ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದೊಂದಿಗೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಧಾಮ ಸಂಪ್ರೋಕ್ಷಣೆ ಮತ್ತು ಪ್ರತಿಷ್ಟಾ ಮಹೋತ್ಸವ ಪುಣ್ಯ ಕಾರ್ಯಗಳು ಸಂಪನ್ನಗೊಳ್ಳಲಿದೆ.

Exit mobile version