ಹತ್ಯಡ್ಕ: ಇತ್ತೀಚೆಗೆ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ಮುಗಿಸಿರುವ ಸಂಪೂರ್ಣ ಶಿಲಾಮಯ ದೇವಾಲಯ ಅರಿಕೇಗುಡ್ಡೆ ವನದುರ್ಗ ಕ್ಷೇತ್ರವು ದಾನಿಗಳ ಸಹಕಾರದಿಂದ ಸಂಪತ್ ಭರಿತವಾಗಿ ಬೆಳೆದಿದೆ.ಶೂನ್ಯದಿಂದ ಆರಂಭವಾದ ವನದುರ್ಗೆಯ ವಾಸಸ್ಥಳ ಇಂದು ಭಕ್ತರೇ ನಿಬ್ಬೆರಗಾಗುವಷ್ಟು ಸಂಪತ್ತು ವನದುರ್ಗೆಯ ಕ್ಷೇತ್ರದಲ್ಲಿ ಕ್ರೂಢಿಕರಣವಾಗುತ್ತಿದ್ದು ದೇವಿಯ ಮಹಿಮೆ ಇದಕ್ಕೆ ಸಾಕ್ಷಿಯಾಗಿದೆ.
ಮಂಗಳೂರಿನ ಖ್ಯಾತ ಜ್ಯೋತಿಷಿ ಶ್ರೀ ಮಧ್ವರಾಯ ಭಟ್ ಕೊಂಚಾಡಿ ಇವರು ಅರಿಕೇಗುಡ್ಡೆ ಕ್ಷೇತ್ರಕ್ಕೆ ಬೇಕಾದ ಅಡುಗೆ ಪಾತ್ರೆ, ಪೂಜಾ ಪರಿಕರ, ಅಡುಗೆ ಸಾಮಾನು, ಗೋದ್ರೇಜ್, ಮಿಕ್ಸಿ, ಗ್ರಾಯಿಂಡರ್, ಫ್ರಿಜ್, ಚಯರ್, ಫ್ಯಾನ್ ಮುಂತಾದ ಸುಮಾರು 10 ಲಕ್ಷ ಮೌಲ್ಯದ ಸಾಮಗ್ರಿಗಳನ್ನು 3 ಬಾರಿ ವಾಹನದಲ್ಲಿ ಕೊಟ್ಟು ಕಳುಹಿಸಿದ್ದು.
ಇವರಿಗೆ ಹಾಗೂ ಇವರ ಕುಟುಂಬ ವರ್ಗಕ್ಕೆ ದೇವಳದ ಮೇಲೆ ಇರುವ ಅಪಾರ ಭಕ್ತಿಗೆ ಕ್ಷೇತ್ರದ ಪರವಾಗಿ ಗೌರವಪೂರ್ವಕ ಅಭಿನಂದನೆಯನ್ನು ದೇವಳದ ಆಡಳಿತ ಮಂಡಳಿ ತಿಳಿಸಿದೆ.ಬ್ರಹ್ಮಕಲಶದ ನಂತರ ಪ್ರತಿ ನಿತ್ಯ ಅನೇಕ ಭಕ್ತರು ದೇವಳಕ್ಕೆ ಆಗಮಿಸಿ ವನದುರ್ಗ ದೇವಿಯ ಕೃಪೆಗೆ ಪಾತ್ರರಾಗುತ್ತಿರುವುದು ವಿಶೇಷ ಎನಿಸಿದೆ.