Site icon Suddi Belthangady

ಬಾಂಜಾರು ಮಲೆ ಮತಗಟ್ಟೆಗೆ ದ.ಕ ಸಿಇಒ ಡಾ.ಆನಂದ್ ಕೆ. ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ-200 ರ ಅನನ್ಯ ಮತಗಟ್ಟೆ ಎನಿಸಿರುವ ಬಾಂಜಾರು ಮಲೆ ಸಮುದಾಯ ಭವನ ಮತಗಟ್ಟೆ 86 ಕ್ಕೆ ದ.ಕ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಆನಂದ್ ಕೆ. ಎ.17 ರಂದು ಭೇಟಿ ನೀಡಿ ಶೇ.100 ಮತದಾನಕ್ಕಾಗಿ ಮತದಾರರೊಂದಿಗೆ ಸಂವಾದಿಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಲೋಕೇಶ್, ಬೆಳ್ತಂಗಡಿ ತಾ.ಪಂ ನ ಕಾ.ನಿ ಅಧಿಕಾರಿ, ತಾ.ಸ್ವೀಪ್ ಸಮಿತಿಯ ಅಧ್ಯಕ್ಷ ವೈಜಣ್ಣ, ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ದ.ಕ ಸ್ವೀಪ್ ಸಮಿತಿ SLMTಪ್ರಮೀಳಾ ರಾವ್, ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ತೇಜಾಕ್ಷಿ, ಸದಸ್ಯ ಡೊಂಬಯ್ಯ ಇಡ್ಕಿದು, ತಾ. ಪ. ವ್ಯವಸ್ಥಾಪಕ ಪ್ರಶಾಂತ್ಡಿ.,ಯೇಗೇಶ ಹೆಚ್.ಆರ್. DLMT ದ.ಕ ಜಿಲ್ಲಾ ಸ್ವೀಪ್ ಸಮಿತಿ, ಗ್ರಾ.ಪಂ ನೆರಿಯ ಗ್ರಾ. ಪ. ಪಿ ಡಿ ಒ. ಸುಮಾ, BLO ಮತ್ತು ಬಾಂಜಾರು ಮಲೆಯ ಮತದಾರರು ಉಪಸ್ಥಿತರಿದ್ದರು.

Exit mobile version