Site icon Suddi Belthangady

ಮದ್ದಡ್ಕ ಶ್ರೀ ರಾಮ ಸೇವಾ ಸಮಿತಿ ಹಾಗೂ ವಿಶ್ವ ಹಿಂದೂ‌ ಪರಿಷತ್ ಭಜರಂಗದಳ ವತಿಯಿಂದ ಶ್ರೀರಾಮ ನವಮಿ ಪ್ರಯುಕ್ತ ಭಜನಾ ಕಾರ್ಯಕ್ರಮ

ಕುವೆಟ್ಟು: ಮದ್ದಡ್ಕ ಶ್ರೀ ರಾಮ ಸೇವಾ ಸಮಿತಿ, ವಿಶ್ವ ಹಿಂದೂ‌ ಪರಿಷತ್ ಭಜರಂಗದಳ ಮದ್ದಡ್ಕ ಇದರ ವತಿಯಿಂದ ಎ.17ರಂದು ಮದ್ದಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ಸೂರ್ಯೋದಯದಿಂದ- ಸೂರ್ಯಾಸ್ತಮಾನದವರೇಗೆ ನಡೆಯುವ ಭಜನಾ ಕಾರ್ಯಕ್ರಮಕ್ಕೆ ಬೆಳಿಗ್ಗೆ ರಘರಾಮ್ ಭಟ್ ಮಠ ಇವರ ನೇತೃತ್ವದಲ್ಲಿ ಗಣಹೋಮ ವೈದಿಕ ವಿಧಾನಗಳು ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಜಿ ಶಾಸಕ ಪ್ರಭಾಕರ ಬಂಗೇರ, ಶ್ರೀ ರಾಮ ಸೇವಾ ಸಮಿತಿ ಪಧಾದಿಕಾರಿಗಳು, ವಿಶ್ವ‌ ಹಿಂದೂ ಪರಿಷತ್ ಹಾಗೂ ಭಜರಂಗದಳ ಇದರ ಪಧಾದಿಕಾರಿಗಳು ಉಪಸ್ಥಿತರಿದ್ದರು.

Exit mobile version