Site icon Suddi Belthangady

ದಯಾ ವಿಶೇಷ ಶಾಲೆಯಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಎ.14 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಆದ ವಂ. ಫಾ. ವಿನೋದ್ ಮಸ್ಕರೇನ್ಹಸ್ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಫೆಲಿಕ್ಸ್ ರವರು ಹಾಗೂ ಎಲ್ಲಾ ಸದಸ್ಯರುಗಳು, ಶ್ರವಣಶಾಸ್ತ್ರಜ್ಞರು ಆದ ಸ್ಟಾಲಿನ್ ರವರು ಮತ್ತು ಅವರ ಕುಟುಂಬದವರು ಭಾಗವಹಿಸಿದ್ದರು.ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಫೆಲಿಕ್ಸ್ ರವರು ಮಾತನಾಡಿ ವಿಶೇಷ ಮಕ್ಕಳ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ ಸಂಸ್ಥೆಯನ್ನು ಕೊಂಡಾಡಿದರು.ಸಂಸ್ಥೆಯ ನಿರ್ದೇಶಕರು ಮತ್ತು ಸಂಚಾಲಕರಾದ ಆದ ಫಾ. ವಿನೋದ್ ಮಸ್ಕರೇನ್ಹಸ್ ಮಾತನಾಡಿ ಡಾ|| ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ನಾವು ಆಚರಿಸುತ್ತಿದ್ದೆವೆ, ಅಂಬೇಡ್ಕರ್ ರವರ ಆಸೆ-ಆಕಾಂಕ್ಷೆಗಳನ್ನು ಸಂವಿಧಾನದಲ್ಲಿ ಅಳವಡಿಸಿರುವುದು ಎಲ್ಲಾರಿಗೂ ದೊರೆಯುವಂತಾಗಲಿ, ಲಯನ್ಸ್ ಕ್ಲಬ್ ವತಿಯಿಂದ ಇಬ್ಬರು ಮಕ್ಕಳಿಗೆ ಶ್ರವಣ ಸಾಧನವನ್ನು ನೀಡಿರುವುದು ನಮಗೆ ಹೆಮ್ಮೆ, ಲಯನ್ಸ್ ಕ್ಲಬ್ನ ಸೇವೆಯನ್ನು ಶ್ಲಾಘಿಸಿದರು ಮತ್ತು ಧನ್ಯವಾದಗಳನ್ನು ತಿಳಿಸಿದರು.

ಅಂಬೇಡ್ಕರ್ ರವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ಸಂವಿಧಾನವನ್ನು ರಚನೆ ಮಾಡಲು ಕಾರಣ ಹಿಂದುಳಿದ ಜನಾಂಗದವರಿಗೆ ಮತ್ತು ತುಳಿತಕ್ಕೆ ಒಳಗಾದವರು ಅನುಭವಿಸಿದ ನೋವು, ಕಷ್ಟ, ವೇಧನೆ ಅವಮಾನ ಈ ಎಲ್ಲಾವನ್ನು ಗಮನಿಸಿ ಸಂವಿದಾನವನ್ನು ರಚನೆ ಮಾಡಲು ಸಾಧ್ಯವಾಯಿತು, ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾರೂ ಸಹ ಈ ನೋವನ್ನು ಅನುಭವಿಸಿದ್ದಾರೆ, ಪ್ರತಿಯೊಬ್ಬ ಭಾರತೀಯ ಪ್ರಜೆಗಳು ಎಷ್ಟೋ ಆಚಾರ-ವಿಚಾರ, ಪದ್ದತಿಗಳು ಪರಂಪರೆಗಳಿದ್ದರೂ ಪ್ರತಿಯೊಬ್ಬರು ಸಮಾನತೆಯಲ್ಲಿ ಜೀವನ ಮಾಡುತ್ತಿದ್ದಾರೆ, ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರ ಮಾಡಿದ್ದನ್ನು ನಾವು ನೋಡುತ್ತೇವೆ, ಯಾವ ಧರ್ಮ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಪಾಲಿಸುತ್ತದೆಯೋ ಅ ಧರ್ಮ ಶ್ರೇಷ್ಠ ಧರ್ಮವಾಗಿದೆ.

ಎಲ್ಲಾರಿಗೂ ಸ್ವಾತಂತ್ರ್ಯ ಸಮಾನತೆ ಸಿಗಬೇಕು ಎಂದು ಅವರು ಶ್ರಮಿಸಿದರು, ಅಂಬೇಡ್ಕರ್ ರವರು ಜ್ಞಾನಿ ಮಾತ್ರವಲ್ಲ ಶ್ರೇಷ್ಠ ವ್ಯೆಕ್ತಿಯಾಗಿದ್ದರು ಎಂದು ಮಾತನಾಡಿದರು.ಈ ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಸ್ವಾತಿರವರು, ವಂದನಾರ್ಪಣೆಯನ್ನು ಮುಖ್ಯ ಶಿಕ್ಷಕಿ ದಿವ್ಯರವರು ನೆರವೇರಿಸಿದರು.

Exit mobile version