Site icon Suddi Belthangady

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವಿಕ ಸಂಘ ಹಾಗೂ ಐಕ್ಯುಎಸಿ ಆಶ್ರಯದಲ್ಲಿ ‘ವಿಶ್ರುತಿ 2k24’ ಕಾರ್ಯಕ್ರಮ

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ಮಾನವಿಕ ಸಂಘ ಹಾಗೂ ಐಕ್ಯುಎಸಿ ಆಶ್ರಯದಲ್ಲಿ ‘ವಿಶ್ರುತಿ 2k24’ ಹಬ್ಬವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ನಿಕಟಪೂರ್ವ ಪ್ರಾಂಶುಪಾಲ ಡಾ.ಶರತ್ ಕುಮಾರ್ ಹೆಚ್ ಕೆ ಇವರು ವಹಿಸಿ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಅನುಕೂಲ ಮಾಡಿಕೊಡುತ್ತದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ನಾತ್ತಕೋತ್ತರ ವಿಭಾಗದ ಸಂಚಾಲಕರಾದ ಡಾ.ರವಿ ಎಂ ಎನ್. ನೆರವೇರಿಸಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಪ್ರಜ್ಞೆ ಹಾಗೂ ಕೌಶಲ್ಯಗಳನ್ನು ಬೆಳೆಸಲು ಸಾಧ್ಯ ಕೇವಲ ತರಗತಿ ಬೋಧನೆ ಅಷ್ಟೇ ವಿದ್ಯಾರ್ಥಿಗಳ ಬೆಳವಣಿಗೆಗೆ ಸಾಕಾಗುವುದಿಲ್ಲ ಎಂದು ತಿಳಿಸಿದರು.

ಮಾನವಿಕ ಸಂಘದ ಸಂಯೋಜಕ ಪ್ರೊಫೆಸರ್ ರೋನಾಲ್ಡ್ ಪ್ರವೀಣ್ ಕೊರೆಯ ಪ್ರಸ್ತಾವನೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಪದ್ಮನಾಭ ಕೆ , ಸಾಂಸ್ಕೃತಿಕ ಸಂಘದ ಸಂಯೋಜಕರಾದ ಪ್ರೊಫೆಸರ್ ಸುರೇಶ್ ವಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಕವಿತಾ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಕುಮಾರಿ ಆಶಾಲತಾ ಉಪಸ್ಥಿತರಿದ್ದರು.

ಮಾನವಿಕ ಸಂಘದ ಅಧ್ಯಕ್ಷ ಸ್ವಸ್ತಿಕ್ ಸ್ವಾಗತಿಸಿದರು. ಪುಷ್ಪ ವಂದನಾರ್ಪಣೆ ಮಾಡಿದರು. ಶ್ರದ್ಧಾ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version