ಬೆಳಾಲು : ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮಾಯ ಬೆಳಾಲು ಆಶ್ರಯದಲ್ಲಿ ಭಜನಾ ಮಂಡಳಿಯ 42ನೇ ವರ್ಷದ ಪಯಣದ ಅಂಗವಾಗಿ ಎ.13ರಂದು ಶ್ರೀ ಮಾಯ ಮಹದೇವ ದೇವಸ್ಥಾನದ ವಠಾರದಲ್ಲಿ ಭಜನಾ ಕಮ್ಮಟೋತ್ಸವ ಜರಗಿತು.
ಕಾರ್ಯಕ್ರಮವನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು ವಹಿಸಿದ್ದರು.
ಶ್ರೀ ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಚ್. ಪದ್ಮ ಗೌಡ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರ ಶೇಖರ ಸಾಲಿಯಾನ್ ಕೊಯ್ಯೂರು, ಬೆಳಾಲು ಚೇತನ ಕ್ಲಿನಿಕ್ ಡಾ. ಸೌಮ್ಯ, ಉಜಿರೆ ಶ್ರೀ ಧನಲಕ್ಷ್ಮೀ ಜ್ಯುವೆಲರ್ಸ್ ಮಾಲಕ ಕೆ. ರಮೇಶ್ ಕುಮಾರ್,ಕೊಲ್ಪಾಡಿ ಭಜನಾ ಮಂಡಳಿ ಅಧ್ಯಕ್ಷ ಸದಾಶಿವ ಗೌಡ ಮೈರಾಜೆ, ಅನಂತೋಡಿ ಭಜನಾ ಮಂಡಳಿ ಅಧ್ಯಕ್ಷನವೀನ್ ಗೌಡ,ಭಜನಾ ಕಮ್ಮಟದ ಉದ್ಘಾಟಕರಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಹಿರಿಯ ಭಜಕರಾದ ಸುಬ್ರಾಯ ಹೊಳ್ಳ ಬೈಪಾಡಿ,ಕುಂಭ ಗೌಡ ಬರಮೇಲು, ಕೃಷ್ಣಪ್ಪ ಅರಸಿನಮಕ್ಕಿ, ಮಂಜುನಾಥ ಆಚಾರ್ಯ ಅಳದಂಗಡಿ, ಪುರುಷೋತ್ತಮ ಕೊಕ್ಕಡ, ಕೃಷ್ಣಪ್ಪ ಗೌಡ ಬೆರ್ಕೆಜಾಲು, ಗಂಗಾಧರ ಸಾಲಿಯಾನ್ ಎಂಜಿರಿಗೆ, ಬಾಲಚಂದ್ರ ಆಚಾರ್ಯ ಮಾಯ, ನಾರಾಯಣ ಮಡಿವಾಳ ಮಂಜುಶ್ರೀ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮ ಗೌಡ, ಬೆಳಾಲು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ಭಜನಾ ತರಬೇತುದಾರರಾದ ಹರೀಶ್ ವಿ. ನೆರಿಯ, ಸಂದೇಶ್ ಮದ್ದಡ್ಕ, ಸಾಹಿತಿ ವಿಮಲ ದುಗ್ಗಣ್ಣ ಕೆರೆಕೋಡಿ, ದೈವ ನರ್ತಕ ಲಿಂಗಪ್ಪ ಪರವ ಕಿರಿಯಾಡಿ ಇವರನ್ನು ಗೌರವಿಸಲಾಯಿತು. ಬಳಿಕ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಮ್ಮಟೋತ್ಸವ ನಡೆಯಿತು.
ಭಜನಾ ಮಂಡಳಿಯ ಗೌರವ ಸಲಹೆಗಾರ ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಟ್ಲ ಮಂಜಲಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಪ್ರಸಾದ್ ಎಂ, ಓಡಿಲ್ನಾಳ ಧರ್ಮೋತ್ತಾನ ಟ್ರಸ್ಟ್ ಅಧ್ಯಕ್ಷ ವೃಷಭ ಆರಿಗ, ಮಾಯ ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಮಾಯಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಪ್ರಭಾ ದಿನೇಶ್, ವರ ಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಲಲಿತ, ರಘು ಎಂ. ಮಂಜುಶ್ರೀ ಬ್ರಹ್ಮಾವರ, ಬೆಳಾಲು ಶ್ರೀ ರಾಮ ಶಾಖೆಯ ಅಧ್ಯಕ್ಷ ರಮಿತ್ ಗೌಡ ಅರಣೆಮಾರು, ಉದ್ಯಮಿ ಜಯಣ್ಣ ಮಿನಂದೇಲು, ಯಶೋಧರ ಆಚಾರ್ಯ ಮಂಡಾಲು, ಉಜಿರೆ ಶುಭ ಜ್ಯುವೆಲ್ಲರಿ ಮಾಲಕ ಸುಭಾಸ್ ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ಗಣೇಶ್ ಕನಿಕ್ಕಿಲ, ಜತೆ ಕಾರ್ಯದರ್ಶಿ ಶೋಭಿತ್, ಸಂಚಾಲಕಿ ಭವಾನಿ ಮಾರ್ಪಲು, ಮಹಿಳಾ ಸಂಚಾಲಕಿ ವಸಂತಿ ಪರಾರಿ, ಸುಜಾತಾ ಮಂಜುಶ್ರೀ, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮಕ್ಕಳ ಭಜನಾ ತಂಡದವರು ಹಾಜರಿದ್ದು ಸಹಕರಿಸಿದರು.