Site icon Suddi Belthangady

ಉಜಿರೆಯ ಸಿವಿಲ್ ಇಂಜಿನಿಯರ್ ಸಂಪತ್ ರತ್ನರಾವ್ ರವರಿಗೆ ರಾಷ್ಟ್ರಮಟ್ಡದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ- ಮೇ 4ರಂದು ನಾಸಿಕ್ ನಲ್ಲಿ ಪ್ರದಾನ

ಉಜಿರೆ: ಇಲ್ಲಿನ ಎಸ್ ಎಲ್ ವಿ ಕನ್ಸಸ್ಟ್ರಕ್ಷನ್ ನ ಸಿವಿಲ್ ಇಂಜಿನಿಯರ್ ಸಂಪತ್ ರತ್ನರಾವ್ ರವರು ರಾಷ್ಟ್ರಮಟ್ಟದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಇದರ ಫೌಂಡೇಶನ್ ಡೇ ಪ್ರಯುಕ್ತ ಮೇ 4ರಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಪತ್ ರತ್ನರಾವ್ ರವರು ಕಳೆದ 30 ವರ್ಷಗಳಿಂದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸೇವೆಯನ್ನು ಸಮಾಜಕ್ಕಾಗಿ ಸಲ್ಲಿಸುತ್ತಿದ್ದಾರೆ.

ಇವರು ಜಿಲ್ಲೆಯಾದ್ಯಂತ ಉತ್ತಮ ಗುಣಮಟ್ಟದ ಆಧುನಿಕ ವಿನ್ಯಾಸದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಹೆಸರು ವಾಸಿಯಾಗಿದ್ದಾರೆ.

Exit mobile version