Site icon Suddi Belthangady

ವೇಣೂರು ಗಾರ್ಡನ್ ವ್ಯೂ ಕಾಂಪ್ಲೆಕ್ಸ್ ನಲ್ಲಿ ಸ್ನೇಹ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಮಳಿಗೆ ಉದ್ಘಾಟನೆ

ವೇಣೂರು: ಇಲ್ಲಿಯ ಗಾರ್ಡನ್ ವ್ಯೂ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಸ್ನೇಹ ಎಲೆಕ್ಟ್ರಾನಿಕ್ಸ್ & ಫರ್ನಿಚರ್‌ನ ನೂತನ ಮಳಿಗೆಯು ಇಂದು ಎ.12ರಂದು ಶುಭಾರಂಭಗೊಂಡಿತು.

ವೇಣೂರು ಚರ್ಚ್‌ನ ಧರ್ಮಗುರು ಫಾ| ಪೀಟರ್ ಅರನ್ಹಾ, ವೇಣೂರು ಜುಮ್ಮಾ ಮಸೀದಿಯ ಧರ್ಮಗುರು ಸಬೀರ್ ಸಾಹದಿ ಹಾಗೂ ಅನಿಲ್ ಪಂಡಿತ್ ದೀಪ ಪ್ರಜ್ವಲಿಸಿ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ವೇಣೂರು ಚರ್ಚ್‌ನ ಧರ್ಮಗುರು ಫಾ| ಪೀಟರ್ ಅರನ್ಹಾ ಅವರು ಆಶೀರ್ವದಿಸಿ, ನೂತನವಾಗಿ ಆರಂಭಗೊಂಡ ಮಳಿಗೆಯು ಗ್ರಾಹಕರಿಗೆ ಸಂತೃಪ್ತಿಯ ಸೇವೆ ನೀಡುವಂತಾಗಲಿ ಎಂದರು.

ವೇಣೂರು ಚರ್ಚ್ ಪಾಲನ ಪರಿಷತ್ ಉಪಾಧ್ಯಕ್ಷ ಡೆನ್ನಿಸ್ ಸಿಕ್ವೆರಾ, ಗುರಿಕಾರ ಎಗ್ಬರ್ಟ್ ರೇಗೊ, ಕಾಂಪ್ಲೆಕ್ಸ್ ಮಾಲಕ ಮಾರ್ಕ್ಸ್ ಎಗ್ಬರ್ಟ್ ಪಿರೇರಾ, ಸೇರಿದಂತೆ ವೇಣೂರಿನ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಂಸ್ಥೆಯ ಮಾಲಕರ ಬಂಧು ಮಿತ್ರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಹರ್ಷಿತ್ ಡಿಸೋಜ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಎಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರ್ವಹಿಸಿದರು.

Exit mobile version