ಬೆಳ್ತಂಗಡಿ: ವಿಜ್ಞಾನ ವಿಭಾಗ ಮಾತ್ರ ಹೊಂದಿರುವ ಉಜಿರೆಯ ಎಸ್.ಡಿ.ಎಂ. ವಸತಿ ಪದವಿಪೂರ್ವ ಕಾಲೇಜಿನ ಎಲ್ಲ 152 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.100 ಫಲಿತಾಂಶ ದಾಖಲಾಗಿದೆ. 109 ಮಂದಿಗೆ ಡಿಸ್ಟಿಂಕ್ಷನ್ ಹಾಗೂ 43 ಮಂದಿಗೆ ಪ್ರಥಮ ಶ್ರೇಣಿ ಲಭಿಸಿದೆ.
ಎಂ.ಧೀಮಂತ್ ಹೆಬ್ಬಾರ್ 592 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 7ನೇ ರಾಂಕ್ ಪಡೆದುಕೊಂಡಿದ್ದು, ಕಾಲೇಜಿನಲ್ಲಿ ಟಾಪರ್ ಆಗಿದ್ದಾರೆ.
ಹರ್ಷಿತ್ ಎ.ವಿ. 585, ವಿಶ್ವಾಸ ನಾಯಕ ಡಿ.ಪಿ. 585, ಸಂಜಯ ಪಾಟೀಲ್ ಕೆ.ಎಲ್. 582, ವಿನಯ್ ಸಿ.ಎಂ. 581, ವರುಣ್ ಕುಮಾರ್ ಎಚ್.ಎಲ್. 580, ಚಿರಾಗ್ ಎಸ್. 578, ಪೂರ್ವಿಕ್ ಟಿ.ಎಂ. 577, ಶರ್ವಿನ್ 576, ತರುಣ್ ಎಚ್.ಬಿ. 574, ಹೊಯ್ಸಳ್ ರಾಜ್ ಕುಮಾರ್ 573, ಧೀರಜ್ ಸಿ. 573, ಜೀವನ್ ಕೆ.ವಿ. 572, ಕೆ.ಎಂ.ಮನೋಜ್ ಕುಮಾರ್ 572, ಸೃಜಿತ್ ಎಸ್.ಎ. 571, ವಿನಯ್ ಕೆ.ಎಂ. 571, ಬಿಂದು ಮಾಧವ 570 ಅಂಕ ಗಳಿಸಿದ್ದಾರೆ.