Site icon Suddi Belthangady

ಪದ್ಮುಂಜ ಸರಕಾರಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣ

ಬೆಳ್ತಂಗಡಿ: ಪದ್ಮುಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲ 29 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.100 ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದ 17 ವಿದ್ಯಾರ್ಥಿಗಳ ಪೈಕಿ 8 ಮಂದಿ ಡಿಸ್ಟಿಂಕ್ಷನ್, 9 ಮಂದಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ವಂಶಿ ಎಚ್.ಪಿ. 567 ಅಂಕ ಪಡೆದು ಟಾಪರ್ ಆಗಿದ್ದಾರೆ. ಇನಾರಾ ಬಾನು 557, ಫಾತಿಮತ್ ಜಸೀಲಾ 552, ಮರಿಯಮ್ಮತ್ ಇಫ್ನಾ 541, ಹಕ್ಷಿತಾ 537, ಫಾತಿಮಾತುಲ್ ತ್ವಯಿಬಾ 528, ಉಳಿಗೆಮ್ಮ 517, ರಫಿಯಾ 515 ಅಂಕ ಪಡೆದಿದ್ದಾರೆ.

ಕಲಾ ವಿಭಾಗದ 12 ವಿದ್ಯಾರ್ಥಿಗಳ ಪೈಕಿ ಲಿಖಿತಾ 546 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. 9 ಮಂದಿಗೆ ಪ್ರಥಮ ಶ್ರೇಣಿ, ಇಬ್ಬರಿಗೆ ದ್ವಿತೀಯ ಶ್ರೇಣಿ ಅಂಕ ಬಂದಿದೆ.

Exit mobile version