ಬಳಂಜ: ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೋತ್ಸವದ ಪ್ರಾರಂಭದ ಶುಭ ಸಂದರ್ಭದಲ್ಲಿ ಮೈಸೂರು ಶ್ರೀದೇವಿ ಮತ್ತು ಬಾಲಕೃಷ್ಣ ಭಟ್ ಮತ್ತು ಕುಟುಂಬಿಕರು ನೂತನವಾಗಿ ನಿರ್ಮಿಸಿದ ಪಲ್ಲಕ್ಕಿಯನ್ನು ದೇವರಿಗೆ ಸಮರ್ಪಿಸಲಾಯಿತು.
ಇದಕ್ಕೆ ಮುಂಚೆ ಬಳಂಜ ಶಾಲಾ ಬಳಿಯಿಂದ ಪಲ್ಲಕ್ಕಿಯ ಭವ್ಯ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಹೆಸರಾಂತ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ, ವಿವಿಧ ವೇಷ ಭೂಷಣಗಳು ಹಾಗೂ ತಾಲೂಕಿನ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಶ್ರೀ ಪಂಚಶ್ರೀ ಮಹಿಳಾ ಭಜನಾ ಮಂಡಳಿ ಸದಸ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ವಿಶೇಷ ಮೆರುಗನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಂಜ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರರಾದ ಶೀತಲ್ ಪಡಿವಾಳ್, ಎಚ್.ದರ್ಣಪ್ಪ ಪೂಜಾರಿ, ಸತೀಶ್ ರೈ ಭಾರ್ಧಡ್ಕ, ಮೈಸೂರು ಬಾಲಕೃಷ್ಣ ಭಟ್ ಮತ್ತು ಕುಟುಂಬಸ್ಥರು, ಬಳಂಜ ನಾಲ್ಕೂರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈಗಾಗಲೇ ದೇವರ ಉತ್ಸವ ಚಾಂದ್ರಮಾನ ಯುಗಾದಿಯ ಶುಭ ದಿನದಂದು ದ್ವಜರೋಹಣಗೊಂಡಿದ್ದು ಏ.15ರಂದು ಜಾತ್ರೋತ್ಸವ ಮತ್ತು ರಥೋತ್ಸವ ನಡೆಯಲಿದೆ.