Site icon Suddi Belthangady

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ಸಮವಸ್ತ್ರದ ಶಾಲು ವಿತರಣೆ

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದ ವತಿಯಿಂದ 2022-2023ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ 500ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ಭಜನಾ ತಂಡದ ಸದಸ್ಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮತ್ತು ಭಜನಾ ತಂಡದ ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಶಾಲು ವಿತರಣೆಯು ಎ.7ರಂದು ಕೇಶವ ಪೂಜಾರಿ ಬರಮೇಲು ಇವರ ಮನೆ ವಠಾರದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ತಂಡದ ಅಧ್ಯಕ್ಷರಾದ ದಿವಾಕರ ಪೂಜಾರಿ ಕಲೆಂಜೊಟ್ಟು ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಉಳ್ಳಾಳ್ತಿ ಭಜನಾ ಮಂಡಳಿ ಆರಂತಬೈಲು ಇದರ ಅಧ್ಯಕ್ಷರಾದ ದಿನೇಶ್ ನಾಯ್ಕ ಕೋಟೆ, ಸತೀಶ್ ಪೂಜಾರಿ ಮೂರ್ಜೆ, ಜಯಪ್ರಸಾದ್ ಗೌಡ ಪರಾರಿ, ಚಂದ್ರಶೇಖರ್ ಗೌಡ ಪರಾರಿ, ದಮಯಂತಿ ಕಜೆ, ಭಾಗವಹಿಸಿದ್ದರು.

ಗೌರವಾರ್ಪಣೆ ಸ್ವೀಕರಿಸಿದ ಸ್ವಾತಿ ಕಜೆ, ಕೃತಿ ಅರ್ಬಿ, ಹರ್ಷಿತಾ ಪಿತ್ತಿಲು ತಮ್ಮ ಸಂತಸದ ಅನುಭವಗಳನ್ನು ಹಂಚಿಕೊಂಡರು.

ಭಜನಾ ತಂಡದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸನತ್ ಕುಮಾರ್ ಮೂರ್ಜೆ ಪ್ರಾಸ್ತಾವಿಕ ಮಾತಾಡಿ ನಮ್ಮ ಭಜನಾ ತಂಡವು ಕೇವಲ ಭಜನೆಗೆ ಮಾತ್ರ ಪ್ರೋತ್ಸಾಹ ನೀಡದೆ ಮಕ್ಕಳ ಶಿಕ್ಷಣ, ಹಿಂದೂ ಧರ್ಮದ ಬೋಧನೆ, ಧಾರ್ಮಿಕ ಪ್ರವಾಸಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದ್ದು, ಮಕ್ಕಳಿಂದ ಒಂದೂ ರೂಪಾಯಿ ಹಣವನ್ನು ಪಡೆಯದೆ ಭಜನಾ ತರಬೇತಿಯನ್ನು ನೀಡುತ್ತಿದ್ದು, ಮಕ್ಕಳಿಗೆ ಬೇಕಾದ ಎಲ್ಲ ವಸ್ತುಗಳನ್ನು ದಾನಿಗಳಿಂದ ಸ್ವೀಕರಿಸಿದ್ದೇವೆ ಎಂದರು.

ಕಾರ್ಯಕ್ರಮವು ಭಜನಾ ತಂಡದ ಸದಸ್ಯರಾದ ರಚನಾ, ಮೈತ್ರಿ, ರಶ್ಮಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಭಜನಾ ತಂಡದ ಸಂಚಾಲಕಿ ಸ್ವಾತಿ ಅರ್ಬಿ, ಸ್ವಾಗತಿಸಿ ದೀಕ್ಷಾ ಅರ್ಬಿ ಕಾರ್ಯಕ್ರಮ ನಿರೂಪಿಸಿ ಉಷಾ ಕಜೆ ಧನ್ಯವಿತ್ತರು.

Exit mobile version