Site icon Suddi Belthangady

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ: ಶ್ರೀ ಉಮಾಮಹೇಶ್ವರ ದೇವರ ಶ್ರೀ ದೇವಾ ಮಹಾದೇವ ಭಕ್ತಿಗೀತೆ ಬಿಡುಗಡೆ

ಮರೋಡಿ: ಶ್ರೀ ಕ್ಷೇತ್ರ ಮರೋಡಿ ದೇವರಬಲ್ಲೆಯ ಶ್ರೀ ಉಮಾಮಹೇಶ್ವರ ದೇವರ ಬ್ರಹ್ಮಕಲಶದ ಸುಸಂದರ್ಭದಲ್ಲಿ “ಶ್ರೀ ದೇವಾ ಮಹಾದೇವ ಭಕ್ತಿಗೀತೆ”ಯನ್ನು ಏ.7ರಂದು ಬಿಡುಗಡೆಗೊಳಿಸಲಾಯಿತು.

ಭಕ್ತಿಗೀತೆಯು ಗಣೇಶ್ ಹೆಗ್ಡೆ ನಾರಾವಿ ಅವರ ಸಾಹಿತ್ಯ, ಗಾಯನ, ಚಿತ್ರಿಕರಣ, ಸಂಕಲನದಿಂದ ಮೂಡಿ ಬಂದಿದೆ.

ಸಮಗ್ರ ನಿರ್ವಹಣೆಯನ್ನು ದೇವೇಂದ್ರ ಹೆಗ್ಡೆ ಕೊಕ್ರಾಡಿ, ಸಂಪೂರ್ಣ ಸಹಕಾರವನ್ನು ಉಷಾಚಂದ್ರ ಮುಳಿಯ, ಸಲಹೆ ಧನ್ವಿತಾ ಹೆಗ್ಡೆ, ಪೋಸ್ಟರ್ ಹಾಗೂ ಪ್ರಚಾರಕಲೆ ಅಶ್ವಿನಿ ಕುಮಾರ್ ಕಲ್ಕಾರ್, ಜಯಂತ್ ಪೂಜಾರಿ ಸಾವ್ಯ ರೆಕಾರ್ಡಿಂಗ್ ಸರ್ಗಮ್ ಸ್ಟುಡಿಯೋ ಉಪ್ಪಿನಂಗಡಿ ಮಾಡಿದ್ದಾರೆ.

Exit mobile version