Site icon Suddi Belthangady

ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ವೈಭವಯುತ ಹಸಿರುವಾಣಿ ಹೊರೆಕಾಣಿಕೆ

ಮರೋಡಿ: ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಭಾನುವಾರ ಎ.07ರಂದು ವೈಭವಯುತವಾಗಿ ನಡೆಯಿತು.

ಕೂಕ್ರಬೆಟ್ಟು ಸರ್ಕಾರಿ ಶಾಲೆಯ ಆವರಣದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಇತರ ಮೊಕ್ತೇಸರರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.

ಹೊರೆಕಾಣಿಕೆ ಮೆರವಣಿಗೆಯು ನಡ್ತಿಕಲ್ಲು ಮೂಲಕವಾಗಿ ಹತ್ತಾರು ವಾಹನಗಳ ಮೂಲಕ ಕ್ಷೇತ್ರಕ್ಕೆ ಸಾಗಿ ಬಂತು. ಪೂರ್ಣಕುಂಭಗಳನ್ನು ಹೊತ್ತುಕೊಂಡ ಮಹಿಳೆಯರು ಸ್ವಾಗತ ಕೋರಿದರು. ವಿವಿಧ ಭಜನಾ ತಂಡಗಳ ಕುಣಿತಾ ಭಜನೆ ಎಲ್ಲರ ಗಮನ ಸೆಳೆಯಿತು. ಚೆಂಡೆ, ಕೀಲು ಕುದುರೆ, ವಾದ್ಯ ಘೋಷ, ವಿವಿಧ ವೇಷ ಭೂಷಣಗಳು ಹಸಿರುವಾಣಿ ಹೊರೆಕಾಣಿಕೆ ವೈಭವಕ್ಕೆ ಕಳೆ ತುಂಬಿತು.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್‌ ಅಜಿಲ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣನ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ ಮರೋಡಿ, ಕೋಶಾಧಿಕಾರಿ ಅಣ್ಣಪ್ಪ ಹೆಗ್ಡೆ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್, ಮೊಕ್ತೇಸರರಾದ ವಿಜಯ ಆರಿಗ ನಿಡ್ಡಾಜೆ, ವಿಜಯ ಕುಮಾರ್ ಬಂಗ, ಸುರೇಂದ್ರ ಸಾಲ್ಯಾನ್‌, ಶಾಲಾ ಮುಖ್ಯಶಿಕ್ಷಕಿ ಸುಫಲಾ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಯಶವಂತ್‌, ಹೊರೆಕಾಣಿಕೆ ಸಮಿತಿಯ ಸಂಚಾಲಕ ಉಮೇಶ್‌ ಸಾಲ್ಯಾನ್‌, ಸಹಸಂಚಾಲಕ ಸುರೇಶ್‌ ಅಂಚನ್‌, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಚಂದ್ರಶೇಖರ ಮೂಡಾಯಿನಡೆ, ಪದ್ಮಶ್ರೀ ಜೈನ್, ಅಶೋಕ್ ಪೂಜಾರಿ, ರವೀಂದ್ರ ಹೆಗ್ಡೆ, ಲಿಂಗಪ್ಪ ಪೂಜಾರಿ, ನಾರಾಯಣ ಪೂಜಾರಿ ಉಚ್ಚೂರು, ಬಾಲಕೃಷ್ಣ ಬಂಗೇರ, ನವೀನ್ ಕೋಟ್ಯಾನ್, ರಾಘವ ಬಂಗೇರ, ಅವಿನಾಶ್ ಕೋಟ್ಯಾನ್, ಮಹಿಳಾ ಸಮಿತಿ ಸಂಚಾಲಕರು, ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

Exit mobile version