ಧರ್ಮಸ್ಥಳ: ಕನ್ಯಾಡಿ ಜಿಲ್ಲೆಯ ಪರಮ ಪಾವನ ಪುಣ್ಯಕ್ಷೇತ್ರ ಉಜಿರೆ ಶೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಯಾತ್ರಾರ್ಧಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತಹ ಸರ್ವ ಸುಸಜ್ಜಿತ ವಸತಿ ವ್ಯವಸ್ಥೆ ಕನ್ಯಾಡಿಯಲ್ಲಿ ಎ.12ರಂದು ಶುಭಾರಂಭಗೊಳ್ಳುತ್ತಿದೆ.
ಉಜಿರೆ ಧರ್ಮಸ್ಥಳ ಹೆದ್ದಾರಿಯ ಕನ್ಯಾಡಿ ಶ್ರೀ ರಾಮಕ್ಷೇತ್ರದ ಮುಂಭಾಗದಲ್ಲಿ ಸಕಲ ಸೌಕರ್ಯ ಯುಕ್ತ ಜನಾರ್ದನ ರೆಸಿಡೆನ್ಸಿ ಎರಡಂತಸ್ತಿನ ನೂತನ ವಸತಿ ಗೃಹ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳುತ್ತಿದೆ.
ಐದು ಹವಾನಿಯಂತ್ರಿತ ಡಬಲ್ ಬೆಡ್ ರೂಂ ಕೊಠಡಿಗಳು ಎರಡು ಟಿ.ಟಿ ವಾಸ್ತವ್ಯದ ಹಾಲ್‌ಗಳು ಎರಡು ನಾನ್ ಎಸಿ ಕೊಠಡಿಗಳನ್ನೊಳಗೊಂಡು.ಬಿಸಿ ನೀರಿನ ವ್ಯವಸ್ಥೆ ವಾಹನಗಳ ಪಾರ್ಕಿಂಗ್ ಸೌಲಭ್ಯ ಹೊಂದಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅತಿ ಸನಿಹದಲ್ಲಿದೆ. ಕೊಠಡಿಗಳ ಮುಂಗಡೆ ಬುಕ್ಕಿಂಗ್ ವ್ಯವಸ್ಥೆಯಿದೆ. ಯಾತ್ರಾರ್ದಿಗಳಿಗೆ ಸೌತಡ್ಕ ಸುಬ್ರಹ್ಮಣ್ಯ ಧರ್ಮಸ್ಥಳ ಉಜಿರೆ ಹಾಗೂ ಸುರ್ಯ ದೇವಸ್ಥಾನಗಳಿಗೆ ಹೋಗಲು ಮಧ್ಯಂತರ ಪ್ರದೇಶದಲ್ಲಿರುವ ವಸತಿಗೃಹ ಸುಖಕರ ವಾಸ್ತವ್ಯಕ್ಕೆ ಅನುಕೂಲವಿದೆ.
ಎ.12ರಂದು ಶುಕ್ರವಾರ ಪೂರ್ವಾಹ್ನ 10.30ಕ್ಕೆ ಜನಾರ್ದನ ರೆಸಿಡೆನ್ಸಿ ವಸತಿಗೃಹದ ಉದ್ಘಾಟನಾ ಸಮಾರಂಭ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕ ವೇದಮೂರ್ತಿ ರಾಮಕೃಷ್ಣ ಕಲ್ಲೂರುರಾಯರು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಅರ್ಚಕ ಗಜಾನನ ಜೋಶಿ, ಧರ್ಮಸ್ಥಳದ ಗಿರೀಶ ಕುದ್ರೆಂತಾಯ, ಕಕ್ಕಂಜೆ ಶ್ರೀ ಕೃಷ್ಣ ನರ್ಸಿಗ್ ಹೋಂ ನ ಡಾ.ಮುರಳಿ ಕೃಷ್ಣ ಇರ್ವತ್ರಾಯ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಕುಮಾರ ಬೈಪಾಡಿತ್ತಾಯರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆಯೆಂದು ಜನಾರ್ದನ ರೆಸಿಡೆನ್ಸಿಯ ಪಾಲುದಾರರಾದ ಸುಮಾ ಮತ್ತು ರಾಘವೇಂದ್ರ ಬೈಪಾಡಿತ್ತಾಯರು ಸರ್ವರನ್ನು ಆದರ ಪೂರ್ವಕವಾಗಿ ಆಮಂತ್ರಿಸಿದ್ದಾರೆ.