Site icon Suddi Belthangady

ಸಾವ್ಯ: ಕರ್ಂಬಲೆಕ್ಕಿಯಲ್ಲಿ ಪುರುಷರ ರಾಶಿ ಪೂಜಾ ಕಾರ್ಯಕ್ರಮ

ಸಾವ್ಯ: ಕರ್ಂಬಲೆಕ್ಕಿ ಪುರುಷರ ಭಕ್ತರ ಸಮಿತಿ ಇದರ ರಾಶಿ ಪೂಜೆ ಜರಗಿತು.

ಪ್ರಾಚೀನ ಕಾಲದಿಂದ ತುಳುನಾಡಿನಲ್ಲಿ ಅತೀ ಭಕ್ತಿ ಭಾವದಿಂದ ಸುಗ್ಗಿ ತಿಂಗಳ ಹುಣ್ಣಿಮೆಯ ಸಂದರ್ಭದಲ್ಲಿ ಪುರುಷ ಕಟ್ಟುವುದು ಆಚರಿಸಲ್ಪಡುವುದಾಗಿದ್ದು ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದ್ದು ಮೂರು ಅಥವಾ ಐದು ದಿವಸ ಕದ್ರಿ ದೇವರ ಹೆಸರಿನಲ್ಲಿ ದೇವರು ಸಹಿತ ವಿವಿಧ ವೇಷಗಳೊಂದಿಗೆ ಗ್ರಾಮದ ಮನೆ ಮನೆಗಳಿಗೆ ತೆರಳಿ ಹರಕೆ-ಕಾಣಿಕೆ ಸ್ವೀಕರಿಸಿ ಸುಮಾರು 30ರಿಂದ 75 ಮಂದಿಯ ತಂಡ ದಿಮಿಸೋಲೆ ಹಾಕುತ್ತಾ ಬಹು ವಿಜೃಂಬಣೆ ಕಟ್ಟು ಕಟ್ಟಲೆಯಂತೆ ನಡೆದು ಬಳಿಕ ದಿನ ನಿಗದಿಗೊಳಿಸಿ ರಾಶಿ ಪೂಜೆ ಮಾಡಿ ಪ್ರಸಾದ ಹಂಚುವ ಕಾರ‍್ಯಕ್ರಮ ನಡೆದು ಅನೇಕ ಭಕ್ತಾಧಿಗಳು ಹಿಂದೆ ಹೇಳಿದ ಹರಕೆ ಸಲ್ಲಿಸಿದರು ಹಾಗೂ ತಮ್ಮ ತಮ್ಮ ಕಷ್ಟಗಳಿಗೆ ಹರಕೆ ಹೇಳಿಕೊಂಡರು.

ಸಮಿತಿಯ ಪಧಾಧಿಕಾರಿಗಳಾದ ಕೆ. ಸದಾಶಿವ ಹೆಗ್ಡೆ , ವಸಂತ ಪಡೀಲ್, ಅಮ್ಮಿ ಪೂಜಾರಿ, ಸಂದೀಪ್ ಬೀಜದಡಿ, ಸುಂದರ ಬಂಗೇರ, ದಿನೇಶ್ ಕೋಟ್ಯಾನ್, ಪ್ರಶಾಂತ್ ಮಲ್ಲರಡ್ಡ, ಶಶಿಧರ ಆಚಾರ್ಯ, ಮತ್ತಿತರರು ರಾಶಿ ಪೂಜಾ ವಿಧಿ ನಡೆಸಿ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿದರು.

ಕೆ.ಸದಾಶಿವ ಹೆಗ್ಡೆ ಧನ್ಯವಾದವಿತ್ತರು.

Exit mobile version