Site icon Suddi Belthangady

ಬಿಸಿಲಿನ ಬೇಗೆ- ಹಕ್ಕಿಗಳಿಗೆ ನೀರು ನೀಡಲು ಧರ್ಮಸ್ಥಳ ರಂಗಶಿವ ತಂಡದಿಂದ ವಿನೂತನ ಯೋಜನೆ: ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನ

ಧರ್ಮಸ್ಥಳ: ಬಿರು ಬೇಸಿಗೆಯ ಬೇಗೆಯಿಂದಾಗಿ ಕರಾವಳಿಯ ಜನರು ತತ್ತರಿಸುತ್ತಿದ್ದಾರೆ. ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ನೀರಿಗಾಗಿ ಹಾಹಾಕಾರವೂ ಶುರುವಾಗಿದೆ. ಹೀಗಿರುವಾಗಲೇ,‌ ಶ್ರೀ ಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗ ನೀವು ಬದುಕಿ ಇತರರನ್ನು ಬದುಕಲು ಬಿಡಿ ಎಂಬ ಧೇಯ ವಾಕ್ಯದೊಂದಿಗೆ ಹಕ್ಕಿಗಳ ರಕ್ಷಣೆಗೆ ಮುಂದಾಗಿದ್ದು, ಕ್ಷೇತ್ರದ ಹಲವೆಡೆ ಹಕ್ಕಿಗಳಿಗೆ ನೀರಿಡುವ ವಿಶೇಷ ಯೋಜನೆ ಹಮ್ಮಿಕೊಂಡು ಕಾರ್ಯಾರಂಭಿಸಿದೆ.

ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಹಲವೆಡೆ ಹಕ್ಕಿಗಳಿಗೆ, ಹಾಗೂ ಬೀದಿ ನಾಯಿಗಳಿಗೆ ನೀರಿಡಲು ಮಡಕೆಗಳನ್ನು ಇಟ್ಟು,ಅದಕ್ಕೆ ಪ್ರತಿನಿತ್ಯ ನೀರು ಹಾಕಲು ರಂಗಶಿವ ಕಲಾ ತಂಡ ಮುಂದಾಗಿದೆ. ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಮಾರ್ಗದರ್ಶನದ ಜೊತೆ ಈ ವಿನೂತನ ಕಾರ್ಯದ ಮಹತ್ವವನ್ನು ಸಾರಿದರು.

ಈಗಾಗ್ಲೇ 50ಕ್ಕೂ ಹೆಚ್ಚಿನ ಕಡೆ ಮಡಕೆಗಳನ್ನು ಇಡಲಾಗಿದೆ.ಕೆಲವೆಡೆ ಪ್ಲಾಸ್ಟಿಕ್ ಬಾಟಲಿಗಳನ್ನು ತುಂಡರಿಸಿ ಅದನ್ನು ಮರದ ಕೊಂಬೆಗಳಿಗೆ ನೇತಾಡಿಸಲಾಗಿದೆ. ಹೀಗೆ ವಿನೂತನ ಕಾರ್ಯದ ಮೂಲಕ ಕಲಾಬಳಗ ತಂಡ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕಾರ್ಯದಲ್ಲಿ ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರ ದಾಸ್, ಹರ್ಷು ಜೈನ್, ನಿತಿನ್ ಗಾಣಿಕ, ಯುಗಂದರ್, ಸಂದೇಶ್, ಸುನಿಲ್ ಕಲ್ಕೊಪ್ಪ, ಬದ್ರಿನಾಥ್, ರಂಜಿತ್ ಮುಂತಾದವರು ಕೈಜೋಡಿಸಿದ್ದಾರೆ.

Exit mobile version