Site icon Suddi Belthangady

ಹತ್ಯಡ್ಕ ಕಾಂಗ್ರೆಸ್ ಬೂತ್ ಸಭೆ

ಹತ್ಯಡ್ಕ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹತ್ಯಡ್ಕ ಗ್ರಾಮದ ಬೂತ್ ಸಂಖ್ಯೆ 214, 215 ಮತ್ತು 216 ಬೂತ್ ಅಧ್ಯಕ್ಷರ, ಕಾರ್ಯದರ್ಶಿ ಹಾಗೂ ಪ್ರಮುಖರ ಸಭೆಯಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಲೋಕಸಭಾ ಚುನಾವಣಾ ಉಸ್ತುವಾರಿ ಧರಣೇಂದ್ರ ಕುಮಾರ್ ಜಿಲ್ಲಾ ಉಸ್ತುವಾರಿಗಳಾದ ಸೆಬಾಸ್ಟಿಯನ್ ಯಾನೆ ಕುಟ್ಟಪ್ಪ, ಪ್ರಮೋದ್ ರೈ ರೇಖ್ಯಾ, ರಜತ್ ಗೌಡ ಉಜಿರೆ ಮತ್ತು ಗ್ರಾಮ ಸಮಿತಿ, ಬೂತ್ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version