ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲು ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲ್ಪಟ್ಟ ಬೇಸಿಗೆ ಶಿಬಿರದಲ್ಲಿ ಗಾಯನ ತರಬೇತಿಯು ನಡೆಯಿತು.
ತರಬೇತುದಾರರಾಗಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಆಶಾ ಮತ್ತು ಶ್ರೀಮತಿ ಶಶಿಕಲಾರವರು ಆಗಮಿಸಿದ್ದರು. ತರಬೇತಿಯನ್ನು ಆರಂಭಿಸಿ ಆಶಾರವರು ಮಾತನಾಡುತ್ತಾ, ಎಲ್ಲರು ಹಾಡುಗಾರರಾಗಲು ಸಾಧ್ಯವಿಲ್ಲದಿದ್ದರೂ ಗಾಯನವನ್ನು ಆಲಿಸುವುದರ ಮೂಲಕ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿಯನ್ನು ತಂದುಕೊಂಡು, ಒತ್ತಡ ಮುಕ್ತವಾಗಿ ಬದುಕಲು ಸಾಧ್ಯ.
ಅಸಾಧ್ಯವೆಂಬ ನಕಾರಾತ್ಮಕ ಮನೋಭಾವವನ್ನು ದೂರೀಕರಿಸಿ ಸಕಾರಾತ್ಮಕವಾಗಿ ಮನಸ್ಸನ್ನು ರೂಪುಗೊಳಿಸಲೂ ಸಂಗೀತ, ಗಾಯನ ಪರಿಣಾಮಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ವಹಿಸಿದ್ದರು. ವಿದ್ಯಾರ್ಥಿಗಳಾದ ನಿಶ್ಮಿತಾ ಸ್ವಾಗತಿಸಿ, ಯೋಗಿತಾ ಧನ್ಯವಾದ ಸಲ್ಲಿಸಿದರು, ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಶಿಕ್ಷಕ ಸಿಬ್ಬಂದಿಗಳೆಲ್ಲರು ಉಪಸ್ಥಿತರಿದ್ದರು.