Site icon Suddi Belthangady

ತೆಂಕಕಾರಂದೂರು ನಿವಾಸಿಗೆ ಫೇಸ್ ಬುಕ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ- ರೂ.96,743 ವಂಚನೆ

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಮಹಿಳೆಯೊಬ್ಬರಿಗೆ ಫೇಸ್ ಬುಕ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ ನಡೆಸಿದ ಘಟನೆ ನಡೆದಿದೆ.

ನೆಬಿಸಾ (38) ಎಂಬವರು ವೇಣೂರು ಪೋಲಿಸ್ ಠಾಣೆಗೆ ನೀಡಿದ ದೂರಿನಂತೆ, ಮಾ.21ರಂದು ಫೇಸ್‌ ಬುಕ್‌ ನಲ್ಲಿ ಮನಿ ವ್ಯೂ ಪರ್ಸನಲ್ ಲೋನ್ ಆಪ್‌ ಮೂಲಕ, ಅಪರಿಚಿತರು ಪರಿಚಯಿಸಿಕೊಂಡಿದ್ದರು.

ನೆಬಿಸಾ ಅವರು ಸಾಲದ ಬಗ್ಗೆ ಅಪರಿಚಿತರಿಂದ ಮಾಹಿತಿ ಪಡೆದು 5 ಲಕ್ಷ ರೂ ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು.

ಬಳಿಕ ಪೋನ್‌ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿ, ಮಾ.28ರ ತನಕ ವಿವಿಧ ಹಂತದಲ್ಲಿ ಒಟ್ಟು 96,743 ರೂ.ಗಳನ್ನು ಹಣವನ್ನು‌ ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

ಬಳಿಕ ಸಾಲವನ್ನು ನೀಡದೇ, ವರ್ಗಾಯಿಸಿಕೊಂಡ ಹಣವನ್ನು ಹಿಂತಿರುಗಿಸದೇ ವಂಚಿಸಿರುವುದಾಗಿ ತಿಳಿಸಲಾಗಿದೆ.

Exit mobile version