Site icon Suddi Belthangady

ಕಾಶಿಬೆಟ್ಟು: ನಿಯಂತ್ರಣ ತಪ್ಪಿ ಲಾರಿ ಪಲ್ಟಿ- ಚಾಲಕ ಪ್ರಾಣಾಪಾಯದಿಂದ ಪಾರು

ಕಾಶಿಬೆಟ್ಟು: ಬೆಳ್ತಂಗಡಿಯಿಂದ ಕಾಶಿಬೆಟ್ಟುವಿಗೆ ಸಂಚರಿಸುತ್ತಿದ್ದ ಜಲ್ಲಿ ತುಂಬಿದ್ದ ಲಾಯಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಎ.03ರಂದು ಮುಂಜಾನೆ ನಡೆದಿದೆ. ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದು.

ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಒಂದು ಜೆಸಿಪಿ ಮತ್ತು ಹಿಟಾಚಿ ಮೂಲಕ ವಾಹನವನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಣ್ಣ ಪುಟ್ಟ ಗಾಯಗಳಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Exit mobile version