Site icon Suddi Belthangady

ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳು-ವಿದ್ಯಾರ್ಥಿ ವೇತನಗಳಿಗಾಗಿ ವಿದ್ಯಾಮಾತಾ ಅಕಾಡೆಮಿಯಲ್ಲಿ ರಜಾ ದಿನಗಳ ತರಬೇತಿ ಶಿಬಿರ

ಬೆಳ್ತಂಗಡಿ: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು 5ನೇ ತರಗತಿ ವಿದ್ಯಾರ್ಥಿಗಳಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕೊಂದು ಅಡಿಗಲ್ಲು ಹಾಕುವ ನಿಟ್ಟಿನಲ್ಲಿ ವಿಶಿಷ್ಟವಾದ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.

ನವೋದಯ, ಸೈನಿಕ್, ಆದರ್ಶ, ಮೊರಾರ್ಜಿ, ಒಲಂಪಿಯಾಡ್ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ, ನೀಟ್, ಎನ್ ಡಿ ಎ, ಕ್ಲಾಟ್, ಎನ್.ಎಂ.ಎಂ.ಎಸ್, ಕೆ.ಎ.ಎಸ್, ಐ.ಎ.ಎಸ್ ವರೆಗಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ರಿಲಯನ್ಸ್, ಗೂಗಲ್, ಬಿರ್ಲಾ, ಇಂಟ್ಯೂಟ್, ಇನ್ಫೋಸಿಸ್, ಕೋಟಕ್ ಸುರಕ್ಷಾ, ಒ.ಎನ್.ಜಿ.ಸಿ, ಕೊಡೆನ್ಸ್ ವಿದ್ಯಾರ್ಥಿವೇತನಗಳ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ಸಂಪೂರ್ಣವಾಗಿ ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುವ ಯೋಜನೆಯೊಂದಿಗೆ ಈ ತರಬೇತಿ ಶಿಬಿರವನ್ನು ಎ.21ರಿಂದ ಮೇ.21ರವರೆಗೆ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯ ತರಬೇತಿ ಕೇಂದ್ರಗಳಲ್ಲಿ ಬೆಳಗ್ಗೆ 10:00ರಿಂದ ಮಧ್ಯಾಹ್ನ 3:00 ರವರಿಗೆ (ವಾರದ 5 ದಿನ) ನುರಿತ ತರಬೇತುದಾರರ ನೇತೃತ್ವದಲ್ಲಿ ನಡೆಸಲಾಗುತ್ತದೆ.

ಈಗಾಗಲೇ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ತರಬೇತಿ ಕೇಂದ್ರದಲ್ಲಿ ಆಧಾರ್ ಪ್ರತಿ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ನೀಡಿ ಹೆಸರನ್ನು ನೋಂದಾಯಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಪುತ್ತೂರು ಕಛೇರಿ: ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ., ಫೋನ್ ನಂ. : 9148935808 / 9620468869

ಸುಳ್ಯ ಕಛೇರಿ: ವಿದ್ಯಾಮಾತಾ ಅಕಾಡೆಮಿ, ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239, ಫೋ: 9448527606

Exit mobile version