Site icon Suddi Belthangady

ಧರ್ಮಸ್ಥಳ: ಶ್ರೀ ಧ.ಮಂ.ಆಂ.ಮಾ ಶಾಲೆಯಲ್ಲಿ ಭರತನಾಟ್ಯ ಹಾಗೂ ಸಂಗೀತ ತರಗತಿಯ ವಾರ್ಷಿಕೋತ್ಸವ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭರತನಾಟ್ಯ ಹಾಗೂ ಸಂಗೀತ ತರಗತಿಯ ವಾರ್ಷಿಕೋತ್ಸವ ಇಂದು ಎ.1ರಂದು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಉದ್ಘಾಟಕರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ.ಸೋಮಶೇಖರ್ ಶೆಟ್ಟಿ ಆಗಮಿಸಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತದನಂತರ ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ನಾವು ಗುರುತಿಸಿ ಅದಕ್ಕೆ ತೊಡಗಿಸಿಕೊಳ್ಳಬೇಕು.ಸಂಗೀತ ನಾಟ್ಯ ಕಲೆಗಳಿಗೆ ಪ್ರಕೃತಿಯೇ ಪೂರಕ.ಹೆತ್ತವರು ಮಕ್ಕಳ ಬೆಳವಣಿಗೆ ಜೊತೆಗೆ ಇದ್ದು ಬೆನ್ನೆಲುಬಾಗಿ ನಿಲ್ಲಿ, ಮನಸ್ಸಿದ್ದರೆ ಮಾರ್ಗವಿದೆ ಎಂದು ನುಡಿದರು.

ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿನಿ ಕುಮಾರಿ ಅನುಜ್ಞಾ ನಿರೂಪಿಸಿ, ಸಂಗೀತದ ಗುರು ಮನೋರಮಾ ತೋಳ್ಪಡಿತ್ತಾಯ ಅವರು ವಿದ್ಯಾರ್ಥಿಗಳಿಗೆ ಹೆತ್ತವರ ಪ್ರೋತ್ಸಾಹ ಹೇಗಿರಬೇಕು, ಕಲಾವಿದರಾಗಿ ಅವರನ್ನು ಹೇಗೆ ಬೆಳೆಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಭರತನಾಟ್ಯ ಗುರುಗಳಾದ ವಿದ್ಯಾ ತೋಸರ್ ಧನ್ಯವಾದ ಇತ್ತರು.ತದನಂತರ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವರ್ಷಪೂರ್ತಿ ತಾವು ಕಲಿತ ವಿಚಾರಗಳನ್ನು ಪ್ರಸ್ತುತ ಪಡಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ.ಅವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹೆತ್ತವರು, ಶಾಲಾ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version