Site icon Suddi Belthangady

ಮುಂಡಾಜೆ: ವಿಷವಿಕ್ಕಿದ ಆಹಾರ ತಿಂದು 10ಕ್ಕಿಂತ ಅಧಿಕ ನಾಯಿಗಳ ಸಾವು

ಮುಂಡಾಜೆ: ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಯಾರೋ ದುರುಳರು ವಿಷವಿಕ್ಕಿದ ಪರಿಣಾಮ 10ಕ್ಕಿಂತ ಅಧಿಕ ಸಾಕು ನಾಯಿ ಹಾಗೂ ಬೀದಿ ನಾಯಿಗಳು ಸಾವನ್ನಪ್ಪಿವೆ.

ಶನಿವಾರ ರಾತ್ರಿ ಮಾ.30ರಂದು ಈ ರಸ್ತೆಯುದ್ದಕ್ಕೂ ಯಾವುದು ಆಹಾರದಲ್ಲಿ ವಿಷವನ್ನು ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ.ಇದನ್ನು ತಿಂದಿರುವ ನಾಯಿಗಳು ಸತ್ತು ಬಿದ್ದಿವೆ.ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದರು.

ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ ಅಂಗಳದಲ್ಲೂ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.ಸಾವನ್ನಪ್ಪಿದ ನಾಯಿಗಳನ್ನು ಪಂಚಾಯಿತಿ ವತಿಯಿಂದ ದಫನ ಮಾಡಲಾಯಿತು.

Exit mobile version