Site icon Suddi Belthangady

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಈಸ್ಟರ್ ಹಬ್ಬ ಆಚರಣೆ

ಬೆಳ್ತಂಗಡಿ: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಮಾ. 29ರಂದು ‘ಗುಡ್ ಫ್ರೈಡೆ’ ಬಳಿಕ ಮಾ.30ರಂದು ಎಲ್ಲಾ ಚರ್ಚ್ ಗಳಲ್ಲಿ ಬಲಿ ಪೂಜೆಗಳು ಪ್ರಾರಂಭಗೊಂಡು ಈಸ್ಟ‌ರ್ ಜಾಗರಣೆಯ ದಿನ ಆಚರಿಸಲಾಯಿತು.

ಏಸು ಕ್ರಿಸ್ತರು 3ನೇ ದಿನದಲ್ಲಿ ಪುನರುತ್ತಾನರಾಗುತ್ತಾರೆ ಎಂದು ಮೊದಲೇ ಬೈಬಲ್ ಬರಹದಲ್ಲಿ ಇದ್ದ ಹಾಗೆ ಅವರ ಆಗಮನಕ್ಕೆ ಕಾಯುವಂತಹ ದಿನ. ಅಂದು ಹೊಸ ಬೆಳಕು, ದೂಪ, ತೀರ್ಥ ನೀರು ಶುದ್ಧಿಕರಣ, ಹಳೆ ಹೊಡಂಬಡಿಕೆ ಮತ್ತು ಹೊಸ ಹೊಡಂಬಡಿಕೆಯ ಬೈಬಲ್ ವಾಚನ, ಪ್ರಾರ್ಥನೆ, ಸಂಗೀತಾ ಗಾಯನಗಳೊಂದಿಗೆ ಬಲಿಪೂಜೆಗಳು ನಡೆಯಿತು. ಬಲಿ ಪೂಜೆ ಮತ್ತು ಹಬ್ಬದ ಸಂದೇಶ ವ. ಫಾ. ವಿಕ್ಟರ್ ಡಿಸೊಜಾ ನೀಡಿದರು.

ವ.ಫಾ. ಜೇಮ್ಸ್ ಡಿಸೊಜಾ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ. ವಿಜಯ್ ಲೋಬೊ, ವ. ಸುನಿಲ್ ಮಿನೇಜಸ್ ಬಲಿ ಪೂಜೆಯಲ್ಲಿ ಸಹಕರಿಸಿದರು.

ಮಾ.31ರಂದು ಭಾನುವಾರ ಏಸು ಕ್ರಿಸ್ತರ ಪುನರುತ್ತಾನದ ಹಬ್ಬ (ಈಸ್ಟರ್ ಹಬ್ಬ ) ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

Exit mobile version