Site icon Suddi Belthangady

ಅರಸಿನಮಕ್ಕಿ: ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ ನಾಲ್ಕು ದಿನಗಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಮಾ.28ರಂದು ಮೊದಲ ದಿನದ ಬೇಸಿಗೆ ಶಿಬಿರ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯ ಸೀತಾರಾಮ ಗೌಡ ಉದ್ಘಾಟಿಸಿದರು.

ಶಾಲಾ ಶಿಕ್ಷಕಿ ದಿವ್ಯಶ್ರೀ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಪಠಿಸಲು ತಿಳಿಸಿಕೊಟ್ಟರು. ಲೋಲಾಕ್ಷಿ ಯಕ್ಷಗಾನ ಹಾಗೂ ತುಳು ಲಿಪಿ, ಸ್ವಾತಿ ಯವರು ಭರತನಾಟ್ಯ ಹಾಗೂ ಸಂಧ್ಯಾ ರವರು ಗಣಕಯಂತ್ರ ತರಬೇತಿಯನ್ನು ನೀಡಿದರು.

ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡರು, ವಿದ್ಯಾರ್ಥಿಗಳಾದ ಕಿರಣ್‌ ಹಾಗೂ ಶ್ರಾವ್ಯ ವಂದಿಸಿದರು, ಹೇಮಾವತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version