ಕಳೆಂಜ: ಕಳೆದ ಹಲವಾರು ವರ್ಷಗಳಿಂದ ಕುಳಾಡಿ ಭಾಗದ ಜನರ ಬಹುಬೇಡಿಕೆ ಸಾಕಾರಗೊಳ್ಳುತ್ತಿದೆ.
ಕಚ್ಚಾ ರಸ್ತೆಯಲ್ಲಿ ಓಡಾಡಿ ಹೈರಾಣಾಗಿದ್ದ ಈ ಭಾಗದ ಜನಗಳಿಗೆ ಕಾಂಕ್ರೆಟ್ ರಸ್ತೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ವಿಶೇಷ 50.00 ಲಕ್ಷ ಮಳೆಹಾನಿ ಪರಿಹಾರ ಅನುದಾನದಲ್ಲಿ ನಿರ್ಮಾಣಗೊಂಡಿದ್ದು ಈ ಭಾಗದ ಜನರು ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಕುಲಾಡಿ ಭಾಗದಲ್ಲಿ 15ರಿಂದ 20ಮನೆಗಳಿಗೆ ದೈನಂದಿನ ಸಂಪರ್ಕ ರಸ್ತೆ ಇದಾಗಿದ್ದು ಕಾಂಕ್ರೀಟಿಕರಣದ ಮುಂಚೆ ಓಡಾಡಲು ಯೋಗ್ಯವಲ್ಲದ ರೀತಿಯಲ್ಲಿತ್ತು, ಮಳೆಗಾಲದಲ್ಲಿ ದಿನಪ್ರತಿ ಸಂಕಷ್ಟವೆ ಆಗಿತ್ತು.
ಊರಿನವರ ಪರಿಶ್ರಮ ಮತ್ತು ಶಾಸಕರ ವಿಶೇಷ ಮೃತುವರ್ಜಿಯಿಂದ ಈ ರಸ್ತೆ ಸಂಪೂರ್ಣಗೊಳ್ಳುತ್ತಿದ್ದೂ ಬೇಡಿಕೆ ಈಡೇರಿದ ಖುಷಿಯಲ್ಲಿದ್ದಾರೆ ಕುಳಾಡಿ ಜನರು.