ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಯೂತ್ ರೆಡ್‌ಕ್ರಾಸ್ ಘಟಕವು, ಉಜಿರೆ ಎಸ್.ಡಿ.ಯಂ ಆಸ್ಪತ್ರೆ, K.M.C ಮಂಗಳೂರು ಮತ್ತು ರೆಡ್‌ಕ್ರಾಸ್ ರಕ್ತನಿಧಿ ಮಂಗಳೂರು, ಇವರ ಸಹಭಾಗಿತ್ವದೊಂದಿಗೆ ಮಾ.22ರಂದು ರಕ್ತದಾನ ಶಿಬಿರವನ್ನು ಆಯೋಜಿಸಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಯಸ್.ಡಿ.ಯಂ ಆಸ್ಪತ್ರೆಯ ವೈದ್ಯ ಡಾ.ಅಶ್ವಿತ್‌ರವರು ಆರೋಗ್ಯವಂತ ವ್ಯಕ್ತಿ ರಕ್ತದಾನ ಮತ್ತು ಇತರ ಅಂಗಾಂಗ ದಾನ ಮಾಡುವ ಮೂಲಕ ಇತರರಿಗೆ ಜೀವದಾನ ಮಾಡಬಹುದು ಎಂದು ನುಡಿದರು.
ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಕುಮಾರ್, ಯೂತ್‌ರೆಡ್‌ಕ್ರಾಸ್ ಘಟಕದ ಪ್ರಾದ್ಯಾಪಕ ಸಂಯೋಜಕ ಡಾ.ಸತ್ಯನಾರಾಯಣ ಭಟ್, ಘಟಕದ ವಿದ್ಯಾರ್ಥಿ ಮುಖಂಡ ಅನೂಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಹನಾ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸುಮಾರು 170 ಯುನಿಟ್ ರಕ್ತದಾನ ಮಾಡಿದರು.