ಬೆಳ್ತಂಗಡಿ: ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜಕೀಯ ಸಮಾವೇಶ ಎ.1ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ನಡೆಯಲಿದೆ.
ಸಿಪಿಐಎಂ ಹಿರಿಯ ಮುಖಂಡ ಬಿ.ಎಂ ಭಟ್ ಅಧ್ಯಕ್ಷತೆ ವಹಿಸಲಿದ್ದು
ಪ್ರದಾನ ಭಾಷಣಗಾರರಾಗಿ ಸಿಪಿಐಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಪ್ರಕಾಶ್ ಭಾಗವಹಿಸಲಿದ್ದಾರೆ.
ದೇಶದ ಪ್ರಚಲಿತ ರಾಜಕೀಯ ವಿದ್ಯಮಾನ ಹಾಗೂ ರೈತರು ಮತ್ತು ಕಾರ್ಮಿಕರ ಮುಂದಿರುವ ಸವಾಲುಗಳ ಬಗ್ಗೆ ಮತ್ತು ಚುನಾವಣಾ ಬಾಂಡ್ ದೇಶದ ಇತಿಹಾಸದಲ್ಲಿ ನಡೆದ ಅತಿ ಭೃಷ್ಟಾಚಾರದ ಕುರಿತು ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.