Site icon Suddi Belthangady

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಮಂಡಲದ ರೈತ ಮೋರ್ಚಾದ ಸಭೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ರೈತಮೋರ್ಚಾದ ಸಭೆ ಮಾ.26ರಂದು ಬಿಜೆಪಿ ಕಚೇರಿಯಲ್ಲಿ ನಡೆಯಿತು.

ರೈತಮೋರ್ಚಾ ಅಧ್ಯಕ್ಷ ವಿಜಯ ಗೌಡ ವೇಣೂರು ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನಲ್ಲಿ ಅನಿಯಮಿತ ಲೋಡ್‌ ಶೆಡ್ಡಿಂಗ್ ನಿಂದಾಗಿ ರೈತರಿಗೆ ಆಗುತ್ತಿರುವ ಸಮಸ್ಯೆಗಳು, ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ರೈತರಿಗೆ ನೀಡಿದ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೃಷಿಕರು ಮತ ಚಲಾಯಿಸುವಂತೆ ಪ್ರೇರೆಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಚರ್ಚಿಸಲಾಯಿತು.

ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಪ್ರಭಾಕರ ಆಚಾರ್ಯ, ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಲಂಬಿಲ, ಪದಾಧಿಕಾರಿಗಳಾದ ವಸಂತ ಮಠ, ವಿಜಯ ಕುಮಾ‌ರ್ ಕಲ್ಲಳಿಕೆ, ಅಶ್ವಿನಿ ಹೆಬ್ಬಾರ್ ಮುಂಡಾಜೆ, ಪಳನಿಸ್ವಾಮಿ, ನವೀನ್‌ ನಿಡ್ಡೆ ಕರುಣಾಕರ ಶಿಶಿಲ, ಸಹಕಾರ ಭಾರತಿ ಅಧ್ಯಕ್ಷ ವೆಂಕಪ್ಪಯ್ಯ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಪೆಂರ್ಬುಡ, ನಂದಕುಮಾ‌ರ್ ಉಪಸ್ಥಿತರಿದ್ದರು.

Exit mobile version