Site icon Suddi Belthangady

ಮಹಿಳೆಯರ ಮುಟ್ಟಿನ ಕಪ್ ಬಳಕೆಯ ಬಗ್ಗೆ ಮಾಹಿತಿ

ತಣ್ಣೀರುಪಂತ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾಕಛೇರಿ ವ್ಯಾಪ್ತಿಯ ತಣ್ಣೀರುಪಂತ ವಲಯದ ಕಲ್ಲೇರಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮುಟ್ಟಿನ ಕಪ್‌ನ ಬಳಕೆ, ಉಪಯೋಗ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ಹಾಗೂ ಉಚಿತ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಿಡ್ಬಿ ಪ್ರಯಾಸ್ ಯೋಜನೆಯ ಯೋಜನಾಧಿಕಾರಿ ಯವರಾದ ಜಯಂತಿ ರವರು ಮುಟ್ಟಿನ ಕಪ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಸಂಗೀತಾ ರವರು ಪ್ಯಾಡ್ ಬಳಕೆಯು ಮಹಿಳೆಯರ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಮಾಹಿತಿ ನೀಡಿ, ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲಾಯಿತು.

ಗುರುವಾಯನಕೆರೆ ಯೋಜನಾಕಛೇರಿ ವ್ಯಾಪ್ತಿಯ ಜ್ಞಾನವಿಕಾಸ ಸಮನ್ವಯಧಿಕಾರಿ ಹರಿಣಿ ಸ್ವಾಗತಿಸಿ, ಸೇವಾಪ್ರತಿನಿಧಿ ಸಂದ್ಯಾ ವಂದಿಸಿದರು.

Exit mobile version